Site icon Suddi Belthangady

ಜೆಸಿಐ ಭಾರತದ ವಲಯ 15ರ ವಲಯ ಅಧಿಕಾರಿಯಾಗಿ ಜೇಸಿ ನವೀನ್ ಕೋಡ್ಲಕ್ಕೆ ಆಯ್ಕೆ


ಮಡಂತ್ಯಾರು: ಜೇಸಿಐ ಮಡಂತ್ಯಾರ್ ಘಟಕದ ಪೂರ್ವಾಧ್ಯಕ್ಷರು, ಯುವ ಉದ್ಯಮಿ ಅಮ್ಮ ಎಲೆಕ್ಟ್ರಿಕಲ್ಸ್ ಬಸವನಗುಡಿ – ಮಡಂತ್ಯಾರು ಇದರ ಮಾಲಕರಾದ ನವೀನ್ ಕುಮಾರ್ ಕೋಡ್ಲಕ್ಕೆ ಇವರು 2023 ನೇ ಸಾಲಿನ ಜೇಸಿಐ ಭಾರತದ ವಲಯ 15ರ ಆಡಳಿತ ಮಂಡಳಿಗೆ ಗೋಗ್ರಿನ್ ವಿಭಾಗದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ಜೇಸಿಐ ಮಡಂತ್ಯಾರ್ ಇದರ 2018ರ ಘಟಕಾಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಘಟಕದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 2022 ರಲ್ಲಿ ಜೇಸಿಐ ಭಾರತದ ವಲಯ 15ರ ವಲಯಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

Exit mobile version