Site icon Suddi Belthangady

ಡಿ.17 ರಂದು ಉಜಿರೆಯಲ್ಲಿ ಕಪುಚಿನ್ ಸೇವಾ ಕೇಂದ್ರದಿಂದ ಕ್ರಿಸ್ಮಸ್ ಆಚರಣೆ


ಬೆಳ್ತಂಗಡಿ : ಕಪುಚಿನ್ ಕೃಷಿಕ್ ಸೇವಾ ಕೇಂದ್ರದಿಂದ ಪ್ರತೀವರ್ಷ ಕ್ರಿಸ್ಮಸ್, ದೀಪಾವಳಿ ಹಾಗೂ ಇನ್ನಿತರ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾ ಬಂದಿದೆ. ಪ್ರತಿಯೊಂದು ಹಬ್ಬವು ನಮಗೆ ಅತ್ಯಮೂಲ್ಯವಾದ ಸಂದೇಶವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಡಿ.17 ರಂದು ಸಂಜೆ ಉಜಿರೆ ಸರ್ಕಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಪುಚಿನ್ ಕೇಂದ್ರದ ನಿರ್ದೇಶಕರು ವ. ಫಾ. ವಿನೋದ್ ಮಾಸ್ಕರೇನಸ್ ಹೇಳಿದರು.

ಅವರು ಡಿ.15 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಅಂದು ಚರ್ಚ್ ನಿಂದ ಬೆಳಾಲು ಕ್ರಾಸ್ ವರೆಗೆ ಮೆರವಣಿಗೆ ಬಂದು ಸರ್ಕಲ್ ನಲ್ಲಿ ಸಭೆ ನಡೆಯಲಿದೆ. ಸ೦ದೇಶವನ್ನು ಆಚರಿಸುವಾಗ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಾ ಇದ್ದೇವೆ. ಕ್ರಿಸ್ಮಸ್ ಹಬ್ಬದ ಆಗಮನದ ಹೊಸ್ತಿಲಲ್ಲಿ ಸ್ನೇಹಿತರೊಂದಿಗೆ ಆಚರಣೆ ಮಾಡುವ ಸುಸಂದರ್ಭದಲ್ಲಿ ಕ್ರಿಸ್ಮಸ್ ಹಬ್ಬ ಸಾರುವಂತ ಮಾನವೀಯ ಮೌಲ್ಯವನ್ನು ನl ಜೀವಂತವಾಗಿರಿಸಲು ಕಾರ್ಯಕ್ರವನ್ನು ಈ ವರ್ಷವೂ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ ಪ್ರಜೆಗಳು ತಮ್ಮದೇ ಶೈಲಿಯಲ್ಲಿ ನೃತ್ಯ, ರೂಪಕ ಹಾಡುಗಳ ಮುಖಾಂತರ ಪ್ರಭು ಯೇಸು ಸಾರಿದ ಶಾ೦ತಿ, ಪ್ರೀತಿ, ಏಕತೆ ಮುಂತಾದ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಿದ್ದೇವೆ. ಅದೇ ರೀತಿ ನಮ್ಮ ಈ ಸಮಾಜ ಸೇವೆಯ ಕಾರ್ಯದಲ್ಲಿ ಕೊಡುಗೆಯನ್ನು ಸ್ಮರಿಸುತ್ತಿದ್ದೇವೆ.

ಕೆಲವು ಕ್ಷಣಗಳನ್ನು ಅವರೊ೦ದಿಗೆ ಕಳೆಯಲು ಬಂದಿದ್ದೇವೆ, ಪ್ರಭು ಯೇಸು ಸಾರಿದ ಕ್ಷಮೆ, ದಯೆ, ಪ್ರೀತಿ ನಮ್ಮಲ್ಲಿ ಮೂಡಿ ಬರಲಿ ನಮ್ಮ ನಾಡು ನೆಮ್ಮದಿಯಿಂದ ಬೆಳಗಲಿ ಎಂದು ಹಾರೈಸುತ್ತಾ, ಮುಂಬರುವ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರುಷ ಎಲ್ಲರಿಗೂ ಶುಭವನ್ನು ತರಲಿ ಬಯಸುತ್ತಾ ನಾಡಿನ ಸಮಗ್ರ ಜನರಿಗೆ ಕ್ರಿಸ್ಮಸ್ ಹಾಗೂ ಹೊಸವರುಷದ ಶುಭಾಶಯವನ್ನು ಕೊರುತ್ತೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕಪುಚಿನ್ ಕೇಂದ್ರದ ಲೆಕ್ಕಿಗ ಪೂರ್ಣಿಮಾ ಮೋನಿಸ್, ದಯಾ ಶಾಲಾ ಮುಖ್ಯ ಶಿಕ್ಷಕಿ ದಿವ್ಯ, ಚೈಲ್ಡ್ ಫ0ಡ್ ಯೋಜನಾ ನಿರ್ಹಣಾಧಿಕಾರಿ ಮೇರಿನ, ಶಿಕ್ಷಣ ಸಂಯೋಜಕಿ ಎಮಿಲ್ಡ ಪಾಯಿಸ್ ಉಪಸ್ಥಿತರಿದ್ದರು.

Exit mobile version