ಬೆಳ್ತಂಗಡಿ :ನೇತ್ರಾವತಿ ಉಳಿಸಿ ಆಂದೋಲನ ಸಮಿತಿ ನೇತೃತ್ವದಲ್ಲಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರ ಪ್ರಧಾನ ಸಂಚಾಲಕತ್ವದಲ್ಲಿ ಡಿ. 18 ರಿಂದ 20 ರ ತನಕ ನಡೆಸಲು ಉದ್ದೇಶಿಸಿದ್ದ ನೇತ್ರಾವತಿ ಉಳಿಸಿ , ಭೃಷ್ಟಾಚಾರ ಅಳಿಸಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ , ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಳ್ತಂಗಡಿ ಭೇಟಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಾದಯಾತ್ರೆ ಮುಂದೂಡಲ್ಪಟ್ಟಿದೆ. ಜನವರಿ 8,9 ಮತ್ತು 10 ರಂದು ಮುಂಡಾಜೆಯಿಂದ ಉಪ್ಪಿನಂಗಡಿ ತನಕ ಪಾದಯಾತ್ರೆ ನಡೆಯಲಿದೆ. ಕಾರ್ಯಕ್ರಮದ ರೂಪುರೇಷೆಗಳು ನಡೆಯುತ್ತಿದ್ದು , ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಪಾದಯಾತ್ರೆ ಯಶಸ್ವಿಗಾಗಿ ಸಭೆಗಳನ್ನು ನಡೆಸಿ , ಸಮಿತಿಗಳನ್ನು ರಚಿಸಲಾಗಿದೆ ಎಂದು ನೇತ್ರಾವತಿ ಉಳಿಸಿ ಭೃಷ್ಟಾಚಾರ ಅಳಿಸಿ ಸಮಿತಿಯ ಸಂಚಾಲಕರುಗಳಾದ ಶೇಖರ್ ಕುಕ್ಕೇಡಿ , ಧರಣೇಂದ್ರ ಕುಮಾರ್ , ನಮೀತಾ ಪೂಜಾರಿ , ಕೆ.ಕೆ ಶಾಹುಲ್ ಹಮೀದ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.