ತೋಟತ್ತಾಡಿ: ಇತಿಹಾಸ ಪ್ರಸಿದ್ದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ರೂ 50ಲಕ್ಷ ಅನುದಾನವನ್ನು ಮಂಜೂರುಗೊಳಿಸಿದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆಯನ್ನು ತಿಳಿಸಿರುವ ಬ್ಯಾನರ್ ಅನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪಿತ್ತಿಲು ಚನನಗೌಡ, ಮಕ್ಕಳಾದ ವಸಂತ ಗೌಡ ಪಿತ್ತಿಲು, ಗೋಪಾಲಕೃಷ್ಣ ಗೌಡ ಸೇರಿ ಮನೆಯ ಹತ್ತಿರ ಅಳವಡಿಸಿದ್ದರು. ಆದರೆ ಯಾರೋ ಕಿಡಿಗೇಡಿಗಳು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಭಿವೃದ್ಧಿಯನ್ನು ಸಹಿಸದೆ ಆ ಬ್ಯಾನರನ್ನು ಹರಿದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.