ತೆಂಕಕಾರಂದೂರು: ತಾಲೂಕಿನಲ್ಲಿ ಹಲವೆಡೆ ಚರ್ಮಗಂಟು ರೋಗ ಬಾಧಿಸಿದ್ದು, ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇದೀಗ ತೆಂಕಕಾರಂದೂರು ಗ್ರಾಮದ ಹಸುಗಳು ರೋಗದಿಂದ ಬಳಲುತ್ತಿವೆ ಎಂದು ಡಿ.13 ರಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಾಸಿಂ ಎಂಬುವರ ಗಿರ್ ಹಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿರುವುದು ಮನಕಲಕುವಂತಿದೆ.
ಈ ಹೋರಿಯು ಕಳೆದ ಒಂದು ವಾರದಿಂದ ಮಲಗಲೂ ಆಗದೇ ಪರಿತಪಿಸುತ್ತಿದೆ. ಚರ್ಮಗಂಟು ರೋಗದಿಂದ ಅದರ ಸ್ನಾಯುಗಳು, ನರಗಳು ಮಲಗಲು ಕೂಡ ಸಹಕರಿಸುತ್ತಿಲ್ಲ ಎಂದು ವರದಿಯಾಗಿದೆ.