Site icon Suddi Belthangady

ಡಿ.15: ರೋಟರಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಭೇಟಿ; ವಿವಿಧ ಯೋಜನೆಗಳಿಗೆ ಚಾಲನೆ ಪತ್ರಿಕಾಗೋಷ್ಠಿ

ಬೆಳ್ತಂಗಡಿ : 51 ವರ್ಷಗಳ ಇತಿಹಾಸವಿರುವ ಬೆಳ್ತಂಗಡಿ ರೋಟರಿ ಕ್ಲಬ್‌ ನಾನಾ ರೀತಿಯ ಕಾರ್ಯಕ್ರಮಗಳ ಮೂಲಕ ತನ್ನನ್ನು ಗುರುತಿಸಿಕೊಂಡಿದೆ. ದ.ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ 2022-23ನೇ ಸಾಲಿನ ಜಿಲ್ಲಾ ಗವರ್ನರ್ ರೊ. ಎನ್. ಪ್ರಕಾಶ್ ಕಾರಂತ್ ಡಿ.15 ರಂದು ಬೆಳ್ತಂಗಡಿಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ. ಮನೋರಮ ಭಟ್ ಹೇಳಿದರು. ಅವರು ಡಿ.13 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ರೋಟರಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಕ್ಲಬ್‌ಗಳು ಈ ವರ್ಷ ಜಲಸಿರಿ, ವನಸಿರಿ, ಆರೋಗ್ಯಸಿರಿ ಹಾಗೂ ವಿದ್ಯಾಸಿರಿ ಯೋಜನೆಯಡಿಯಲ್ಲಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ. ಜಿಲ್ಲಾ ಗವರ್ನರ್ ತಮ್ಮ ವ್ಯಾಪ್ತಿಯ ಎಲ್ಲಾ ರೋಟರಿ ಕ್ಲಬ್‌ಗಳಿಗೆ ಅಧಿಕೃತ ಭೇಟಿ ಮಾಡಿ ಅಲ್ಲಿಯ ಚಟುವಟಿಕೆಗಳನ್ನು ವೀಕ್ಷಿಸುವುದು ವಾಡಿಕೆಯಂತೆ ಭೇಟಿ ನೀಡಲಿದ್ದಾರೆ ಅಂದು ಬೆಳಿಗ್ಗೆ 9-30 ಗಂಟೆಗೆ ರೋಟರಿ ಸೇವಾಭವನದಲ್ಲಿ ಕ್ಲಬ್‌ನ ನಿರ್ದೇಶಕ ಮಂಡಳಿ ಹಾಗೂ ಸದಸ್ಯರನ್ನೊಳಗೊಂಡ ಕ್ಲಬ್‌ ಅಸೆಂಬ್ಲಿಯನ್ನು ನಡೆಸಲಿದ್ದಾರೆ.

ಬಳಿಕ ವಿದ್ಯಾಸಿರಿ ಯೋಜನೆಯಡಿಯಲ್ಲಿ ಸೆಲ್ಕೊ ಹಾಗೂ ದಾನಿಗಳ ನೆರವಿನೊಂದಿಗೆ ಗುರುವಾಯನಕ ಸರಕಾರಿ ಪಾಥಮಿಕ ಶಾಲೆಗೆ ನೀಡಲಿರುವ ಸ್ಮಾರ್ಟ್ ಕ್ಲಾಸ್‌ನ್ನು ಶಾಲೆಗೆ ಹಸ್ತಾಂತರ ಮಾಡಲಿದ್ದಾರೆ.
ಅರಣ್ಯ ಇಲಾಖೆ ಹಾಗೂ ಕಾಲೇಜಿನ ರೆಡ್ ಕ್ರಾಸ್ ವಿಭಾಗದೊಂದಿಗೆ ಜಂಟಿಯಾಗಿ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಆವರಣದಲ್ಲಿ ರೋಟರಿ ಕ್ಲಬ್ ವನಸಿರಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಿರುವ ವೃಕ್ಷವಾಟಿಕಾ ಆರ್ಬೋರೇಟಂ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.
ಆರೋಗ್ಯ ಸಿರಿ ಯೋಜನೆಯಡಿಯಲ್ಲಿ 15 ಆಯ್ದ ಅರ್ಹ ಫಲಾನುಭವಿಗಳಿಗೆ ರೋಟರಿ ಸೇವಾಭವನದಲ್ಲಿ ಗಾಲಿ ಕುರ್ಚಿಗಳನ್ನು ವಿವರಿಸಲಿದ್ದಾರೆ.
ಸಂಜೆ: 7-00ಕ್ಕೆ ಉಜಿರೆಯ ಓಷಲ್ ಪರ್ಲ್ ಹೋಟೇಲ್‌ ಸಭಾಂಗಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ವಲಯ IV ರ ಸಹಾಯಕ ಗವರ್ನರ್ ರೋ, ಮೇಜರ್ ಡೋನರ್ ಮೇಜರ್ ಜನರಲ್ ಎಂ.ಎ.ಭಟ್ (ನಿವೃತ್ತ) ಹಾಗೂ ವಲಯ ಸೇನಾನಿ ರೂ. ಶರಶ್‌ಕೃಷ್ಣ ಪಾಡುವೆಟಣ್ಣಾಯ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ.ಎಂದರು. ಪತ್ರಿಕಾ ಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಘನೇಶ್, ಮಾಜಿ ಅಧ್ಯಕ್ಷ ನ್ಯಾಯವಾದಿ ಬಿ. ಕೆ. ಧನಂಜಯ ರಾವ್, ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿಯೋಜಿತಾ ಕಾರ್ಯದರ್ಶಿ ವಿದ್ಯಾ ಕುಮಾರ್ ಕಂಚೋಡು ಉಪಸ್ಥಿತರಿದ್ದರು

Exit mobile version