Site icon Suddi Belthangady

ತೆಂಕಕಾರಂದೂರು: ಜ್ವರದಿಂದ ಬಳಲಿ ಪವಿತ್ರಾ ನಿಧನ

ತೆಂಕಕಾರಂದೂರು ಗ್ರಾಮದ ಅರ್ಬಿ ಮನೆಯ ಸಿಂಗರವರ ಪುತ್ರಿ ಪವಿತ್ರ (22ವ) ಅವರು ಅಸೌಖ್ಯದಿಂದ ಡಿ.12 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ 2 ದಿನದಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜ್ವರ ಉಲ್ಬಣಗೊಂಡ ನಂತರ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ತಂದೆ, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version