Site icon Suddi Belthangady

ಎರುಕಡಪ್ಪು ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಗೇಟ್ ಕೊಡುಗೆ

ಕಳಿಯ: ಇಲ್ಲಿಯ ಎರುಕಡಪ್ಪು ಅಂಗನವಾಡಿ ಕೇಂದ್ರ ಒಳಾಂಗಣದ ದ್ವಾರಕ್ಕೆ ಕಬ್ಬಿಣದ ಗೇಟ್ ನ್ನು ಬಾಲ ವಿಕಾಸ ಸಮಿತಿ ಮಾಜಿ ಸದಸ್ಯರಾದ ಅಲಕ್ಕೆದಡ್ಡ ಹಸನಬ್ಬ (ಪುತ್ತುಮೋನು) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗುಣವತಿ ಕೆ.ಎನ್. ರವರ ಮೂಲಕ ಡಿ.12 ಕೊಡುಗೆಯಾಗಿ ನೀಡಿದರು.

ಬಾಲ ವಿಕಾಸ ಸಮಿತಿ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಇವರು ಕಳೆದ ಹಲವು ವರ್ಷಗಳಿಂದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಿ ಸಹಕರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಗೀತಾ ಮತ್ತು ಮಕ್ಕಳು ಉಪಸ್ಥಿತರಿದ್ದರು.

Exit mobile version