Site icon Suddi Belthangady

ನೆರಿಯ ಗ್ರಾಮದ ಅಣಿಯೂರು ಪೇಟೆಯಲ್ಲಿ ಬೆಳಿಗ್ಗೆ ಕಾಡಾನೆ ಪ್ರತ್ಯಕ್ಷ

ನೆರಿಯ: ಇಲ್ಲಿಯ ಪಂಚಾಯತ್ ವ್ಯಾಪ್ತಿಯ ಅಣಿಯೂರು ಪೇಟೆಯ ಸೇತುವೆ ಬಳಿಯ ನದಿಯಲ್ಲಿ ಕಾಡಾನೆ ಒಂದು ಡಿ.12ರಂದು ಪ್ರತ್ಯಕ್ಷವಾಗಿದೆ.

ಕಾಡಾನೆಯನ್ನು ಕಂಡ ನಾಗರಿಕರು ಒಂದು ಕ್ಷಣ ಬೆರಗಾಗಿದ್ದಾರೆ.ಬಾಂಜಾರು ಮಲೆ ಭಾಗದಿಂದ ಬಂದಿರಬಹುದು ಎಂದು ಗ್ರಾಮಸ್ಥರು ತಿಳಸಿದ್ದಾರೆ.

ನಂತರ ಅಣಿಯೂರು ನದಿ ಮೂಲಕ ಹಾದು ನೆಕ್ಕರೆದಾರಿಯಾಗಿ ಹುಂಬಾಜೆ ಭಾಗಕ್ಕೆ ಹೋಗಿದೆ ಎಂದು ತಿಳಿಸಿದ್ದಾರೆ.

ಅಣಿಯೂರು ಗ್ರಾಮದಲ್ಲಿ ಯಾವುದೇ ಕೃಷಿ ಹಾನಿ ಮಾಡಿದ ವರದಿಯಾಗಿಲ್ಲ.

Exit mobile version