Site icon Suddi Belthangady

ನಡ ಸರ್ಕಾರಿ ಪದವಿಪೂರ್ವ ಕಾಲೇಜು ವಾರ್ಷಿಕ ಪ್ರತಿಭಾ ಪುರಸ್ಕಾರ

ನಡ :”ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯಕ್ಕೆ ಒತ್ತು ಕೊಡಬೇಕು. ಕಳೆದು ಹೋದ ಸಮಯ ಮತ್ತೆ ಸಿಗುವುದಿಲ್ಲ. ನಾವು ಆತ್ಮಾ ವಲೋಕನ ಮಾಡಿಕೊಂಡು ಮುಂದುವರಿದಾಗ ಸಮಾಜದಲ್ಲಿ ಒಂದು ಶಕ್ತಿಯಾಗಲು ಸಾಧ್ಯವಾಗುತ್ತದೆ.” ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ಅಭಿಪ್ರಾಯ ಪಟ್ಟರು.ಅವರು ನಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ.9 ರಂದು ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದ ದೀಪ ಪ್ರಜ್ವಲನೆ ಗೈದು ಮಾತನಾಡಿದರು.

ಎಲ್ಲರನ್ನೂ ಒಗ್ಗೂ ಡಿಸುವ ನಮ್ಮ ದೇಶದ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಬೆಳೆಸಿಕೊಂಡಾಗ ಮಾತ್ರ ದೇಶ ಪ್ರಗತಿ ಯಾಗುತ್ತದೆ ಎಂದರು. ಶಾಸಕರು ಈ ಸಂಧರ್ಭದಲ್ಲಿ ಸಂಸ್ಥೆಯ ಕಾಮಗಾರಿಗಳಿಗೆ ಅನುದಾನದ ಭರವಸೆಯನ್ನಿತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಗೌಡ ವಹಿಸಿಕೊಂಡಿದ್ದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ಬಾಲಕಿಯರ ಶೌಚಾಲಯ ನಿರ್ಮಾಣದ ಗುತ್ತಿಗೆದಾರ ಜನಾರ್ಧನ ಗೌಡ, ನಡ ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಪ್ರಥಮ ದರ್ಜೆ ಗುಮಾಸ್ತೆ ಶ್ರೀಮತಿ ಜಾಹ್ನವಿ, ಸಂಸ್ಥೆಯ ಕ್ರೀಡಾ ತರಬೇತುದಾರ ಹರ್ಷ ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜಿತ್ ಆರಿಗ, ಸ್ಟಾರ್ ಲೈನ್ ಶಿಕ್ಷಣ ಸಂಸ್ಥೆಯ ಸಂಚಾಲಕ ಹಬೀಬ್ ಸಾಹೇಬ್, ಗ್ರಾಮ ಪಂಚಾಯತ್ ಸದಸ್ಯ ಹರಿಶ್ಚಂದ್ರ ಗೌಡ, ಬೆಳ್ತಂಗಡಿ ಪ್ರಾ. ಕೃ. ಪ. ಸ. ಸಂಘದ ನಿರ್ದೇಶಕ ಮುನಿರಾಜ ಅಜ್ರಿ, ನಡ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಯಾಕುಬ್, ಕಾಲೇಜು ವಿದ್ಯಾರ್ಥಿ ನಾಯಕ ನಿತೇಶ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೀರಪ್ಪ ಸಾಲಿಯಾನ್ ಉಪಸ್ಥಿತರಿದ್ದರು.

ಊರಿನ ಗಣ್ಯರಾದ ವಸಂತ ವಿ. ಜಿ. ಕೂಲ್, ಹಾಲು ಉತ್ಪದಕ ಸಂಘ ಜಯಂತ್ ಗೌಡ, ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧಾಕರ್ ಪೂಜಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂಧರ್ಭದಲ್ಲಿ ಹಬೀಬ್ ಸಾಹೇಬ್ ಸಂಸ್ಥೆಗೆ ಗೋಡೆ ಗಡಿಯಾರವನ್ನು ಹಸ್ತಾoತರಿಸಿದರು.

ಮುನಿರಾಜ ಅಜ್ರಿಯವರು ಕಾಲೇಜು ಗ್ರಂಥಾಲಯಕ್ಕೆ ರೂಪಾಯಿ 10,000 ಮೌಲ್ಯದ ಪುಸ್ತಕಗಳ ಘೋಷಣೆ ಮಾಡಿದರು.ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಅಭಿನಂದನೆ ಕಾರ್ಯಕ್ರಮ ವನ್ನು ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪ ನಿರ್ವಹಿಸಿದರು. ಕ್ರೀಡಾ ವಿಭಾಗದ ವಿಜೇತರ ಪಟ್ಟಿಯನ್ನು ಕ್ರೀಡಾ ಸಂಯೋಜಕಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ವಾಚಿಸಿದರು.ಉಪನ್ಯಾಸಕಿ ಶ್ರೀಮತಿ ವಸಂತಿಯವರ ಮಾತೆ ದಿ. ಸುಬ್ಬಮ್ಮರವರ ಸ್ಮರಣಾರ್ಥ ದತ್ತಿ ನಿಧಿ, ಕಾಲೇಜು ಉಪನ್ಯಾಸಕರು ತಮ್ಮ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರೋತ್ಸಾಹಕ ನಿಧಿ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ವಿಜೇತ ವಿದ್ಯಾರ್ಥಿಗಳ ಅಭಿನಂದನೆ ನಿರ್ವಹಣೆ ಯನ್ನು ಶ್ರೀಮತಿ ಇತಿಹಾಸ ಉಪನ್ಯಾಸಕಿ ಶ್ರೀಮತಿ ವಿದ್ಯಾ ನಿರ್ವಹಿಸಿದರು.

ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಖೇತ ಸಹಕರಿಸಿದರು.ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ. ವಿ. ವರದಿ ವಾಚಿಸಿದರು ಮತ್ತು ಅತಿಥಿ ಗಳನ್ನು ವಂದಿಸಿದರು.ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿದರು.ವಿದ್ಯಾರ್ಥಿನಿಯರಾದ ನೀಲಾವತಿ, ತೃಪ್ತಿ, ರಕ್ಷಿತಾ, ಬಿಸ್ಮಿತಾ, ಸವಿತಾ ಪ್ರಾರ್ಥಿಸಿದರು.ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಕಾರ್ಯಕ್ರಮ ನಿರೂಪಿಸಿದರು .

Exit mobile version