ಗರ್ಡಾಡಿ : ಇಲ್ಲಿಯ ಪಡಗಂಡಿ ಗ್ರಾಮದ ಗುಜ್ಜೊಟ್ಟು ಮನೆಯ ಎಲಿಜಾಬೆತ್ ಮತ್ತು ದಿ. ವಲೇರಿಯಾನ್ ಮೋನಿಸ್ ದಂಪತಿಯ ಪುತ್ರ ಜೋನ್ ಕಿರಣ್ ಮೋನಿಸ್ (42) ಡಿ.7 ಕೆನಡಾದ ಸಮಯ 11ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಮದುವೆಯಾದ ಬಳಿಕ ಕೆನಡಾಕ್ಕೇ ಉದ್ಯೋಗಕ್ಕಾಗಿ ತೆರಳಿದ್ದರು. ಮೃತರ ತಂದೆ ಈ ಮೊದಲೇ ತೀರಿಕೊಂಡಿದ್ದು, ತಾಯಿ ಎಲಿಜಬೆತ್ ಮೋನಿಸ್, ಪತ್ನಿ ಲವೀನಾ ಮೊನಿಸ್, ಪುತ್ರಿ ಕಿಯಾರ, ಅಮೇರಿಕಾದಲ್ಲಿರುವ ಸಹೋದರ ಕ್ಲಿಫರ್ಡ್ ಮೊನಿಸ್, ಗರ್ಡಾಡಿ ಯಲ್ಲಿರುವ ಸ್ಟೀವನ್ ಮೋನಿಸ್, ಕೆನಡಾ ದಲ್ಲಿರುವ ಸಹೋದರಿಯರಾದ ಶಾಲಿನಿ ಡಿಸಿಲ್ವ ಮತ್ತು ಶಾಂತಿ ನೋರೋನಃ, ಆಸ್ಟ್ರೇಲಿಯಾದಲ್ಲಿರುವ ಆಶಾ ಲಿನೆಟ್ , ಕುಟುಂಬಸ್ಥರು ಹಾಗೂ ಬಂಧು ವರ್ಗದವರನ್ನು ಆಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಕೆನಡಾ ದಲ್ಲಿರುವ ಸೈಂಟ್ ಅಲ್ಬರ್ಟ್ ಚರ್ಚ್ನಲ್ಲಿ ಡಿ.12ರಂದು ನೆರವೇರಲಿದೆ ಎಂದು ಮನೆಯವರು ತಿಳಿಸಿದ್ದಾರೆ.