ಬೆಳ್ತಂಗಡಿ : ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಮಾಣಿಕ್ಯ ನವೋದಯ ಸ್ವ ಸಹಾಯ ಸಂಘದ ಸದಸ್ಯ ದಯಾನಂದ ಶೆಟ್ಟಿ ಯವರಿಗೆ ಮಂಜೂರಾದ ಅಪಘಾತ ವಿಮೆ ರೂ.10 ಸಾವಿರ, ಹಾಗೂ ಉಳಿದ ಕನಸು ನವೋದಯ ತಂಡದ ಸದಸ್ಯೆ ಲತಾ ರವರಿಗೆ, ಸುವರ್ಣ ನವೋದಯ ತಂಡದ ಸದಸ್ಯ ಮೊಯಿದಿನ್, ಜ್ಯೋತಿ ತಂಡದ ಸದಸ್ಯ ಪ್ರಕೃತಿರಾಜ್, ವಿನಾಯಕ ತಂಡದ ಸದಸ್ಯೆ ಲೀಲಾ ಎಂ., ಆಫತ್ ಭಾಂದವ ತಂಡದ ಸದಸ್ಯ ಗಾಡ್ ಫ್ರಿ ಲೋಬೊ, ಸ್ನೇಹಿತರು ತಂಡದ ಸುನಿಲ್ ರೋಶನ್ ಪಿಂಟೋ ಇವರುಗಳಿಗೆ ಮಂಜೂರಾದ ವೈದ್ಯಕಿಯ ನೆರವು ಚೆಕ್ ಹಸ್ತಾಂತರ ಡಿ.9 ರಂದು ನಡೆಯಿತು.
ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಮಹೇಶ್ ಕುಮಾರ್ ಫಲಾನುಭವಿಗಳಿಗೆ ಚೆಕ್ ಹಸ್ತಾಂತರ ಮಾಡಿದರು. ವಲಯ ಪ್ರೇರಕಿ ಜಯಂತಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.