Site icon Suddi Belthangady

ಡಿ.11 ಶಿರ್ಲಾಲುವಿನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘದಿಂದ ತಾ.ಮಟ್ಟದ ಕ್ರೀಡಕೂಟ

ಶಿರ್ಲಾಲು: ಮೂಲ್ಯರ ಯಾನೆ ಕುಲಾಲರ ಸಂಘ ಶಿರ್ಲಾಲು, ಅಳದಂಗಡಿ ಇದರ ವಾರ್ಷಿಕೋತ್ಸವ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟವು ಡಿ 11 ರಂದು ಸಂಘದ ವಠಾರ ಶಿರ್ಲಾಲುವಿನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮೂಲ್ಯರ ಯಾನೆ ಕುಲಾಲರ ಸಂಘದ ಜಿಲ್ಲಾಧ್ಯಕ್ಷ ಮಯೂರ ಉಳ್ಳಾಳ ನೇರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಶಿರ್ಲಾಲು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಾಧವ ಕುಲಾಲ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಪರುಷರಿಗೆ ಕಬಡ್ಡಿ,ವಾಲಿಬಾಲ್,ಹಗ್ಗಜಗ್ಗಾಟ,ಮಹಿಳೆಯರಿಗೆ ತ್ರೋಬಾಲ್,ಹಗ್ಗಜಗ್ಗಾಟ,ಸಂಗೀತ ಕುರ್ಚಿ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳು ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮಾಧವ ತಿಳಿಸಿದ್ದಾರೆ.

Exit mobile version