Site icon Suddi Belthangady

ನಿಡ್ಲೆ ಗ್ರಾ.ಪಂ ನಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಉಜಿರೆ ಗ್ರಾ.ಪಂ ಗೆ ವರ್ಗಾವಣೆಗೊಂಡ ಶ್ರವಣ್ ಕುಮಾರ್ ಅವರಿಗೆ ಬೀಳ್ಕೊಡುಗೆ

ನಿಡ್ಲೆ: ನಿಡ್ಲೆ ಗ್ರಾಮ ಪಂಚಾಯತ್ ನಲ್ಲಿ ಕಳೆದ 3 ವರ್ಷ ಹತ್ತು ತಿಂಗಳ ಕಾಲ ಗ್ರೇಡ್ 1 ಕಾರ್ಯದರ್ಶಿಯಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ಇದೀಗ ಉಜಿರೆ ಗ್ರಾ.ಪಂ. ಗೆ ವರ್ಗಾವಣೆಯಾದ ಶ್ರವಣ್ ಕುಮಾರ್ ಅವರನ್ನು ಡಿ.6 ರಂದು ಗ್ರಾ.ಪಂ. ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಬರೆಂಗಾಯದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಬಸ್ ನಿಲ್ದಾಣವನ್ನು ಇತ್ತೀಚೆಗೆ ನವೀಕರಣ ಮಾಡಿದ್ದಕ್ಕಾಗಿ ಹೊನ್ನಪ್ಪ ಗೌಡ ಮತ್ತು ಅವರ ಪತ್ನಿಯವರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಅಭಿನಂದಸಲಾಯಿತು.

ಈ ಸಂದರ್ಭದಲ್ಲಿ ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದ್ವಿತೀಯ ಸಹಾಯಕ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ಹಾಗೂ ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಕ್ಷಕರು ಮತ್ತು ವಿವಿಧ ಇಲಾಖೆಯ ನೌಕರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version