ನಾವೂರು : ಆರೋಗ್ಯ ಇಲಾಖೆಯ ವತಿಯಿಂದ 1 ರಿಂದ 15 ವರ್ಷದ ವಯಸ್ಸಿನ ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸುವ ಸಲುವಾಗಿ ಜಪಾನಿಸ್ ಎನ್ ಸೆಫಲೈಟಿಸ್ (ಜೆಇ) ಲಸಿಕೆಗಳನ್ನು ನಾವೂರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಡಿ.5ರಂದು ನೀಡಲಾಯಿತು.
ಸದ್ರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗಣೇಶ್ ಗೌಡ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ ವೆಂಕಟಕೃಷ್ಣ ರಾಜ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಗ್ರಾ.ಪಂ ನಾವೂರು, ಹರೀಶ್ ಸಾಲಿಯಾನ್ ಅಧ್ಯಕ್ಷರು ಸಿ ಎ ಬ್ಯಾಂಕ್ ಬಂಗಾಡಿ ಹಾಗೂ ಸದಸ್ಯರು ಗ್ರಾಮ ಪಂಚಾಯತ್ ನಾವೂರು, ಸರಕಾರಿ ಪ್ರೌಢ ಶಾಲಾ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರು ಹಾಗೂ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರೀ ರಕ್ಷಿತ್ ಮತ್ತು ಆರೋಗ್ಯ ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.