ಗುತ್ತಿನಬೈಲು: ಸ. ಹಿ. ಪ್ರಾ. ಶಾಲೆ ಗುತ್ತಿನಬೈಲು ಇಲ್ಲಿ ನ.28 ರಂದು ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಪ್ರಭಾಕರ್ ಭಟ್ ಗುತ್ತಿನಬೈಲು, ಉಪಾಧ್ಯಕ್ಷರಾಗಿ ಸುನಂದ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ಜಾನಕಿ, ಸುಂದರ, ಮುತ್ತು, ಭಾರತಿ, ವಸಂತ ಮಲೆಕುಡಿಯ, ಗುಲಾಬಿ, ಪ್ರೇಮ, ಲಲಿತ, ಆಯಿಷಾ, ಭೋಜಪೂಜಾರಿ,ಸದಾನಂದ, ಕುಸುಮ, ಪೂರ್ಣಿಮಾ, ಸುಜಾತ, ಶಶಿಕಲ, ಸುಜಾತ ಆಯ್ಕೆಯಾದರು.