Site icon Suddi Belthangady

ಆಟೋ ಚಾಲಕಿಯರಿಗೆ ವಾಹನ ಚಾಲನ ಪರವಾನಿಗೆ ಹಾಗೂ ಹೊಲಿಗೆ ತರಬೇತಿ ದಾರರರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ), ಗುರುವಾಯನಕೆರೆ, ಮಹಿಳಾ ಜ್ಞಾನ ವಿಕಾಸ ಹಾಗೂ ಮಹಿಳಾ ಮಂಡಲ (ರಿ )ಶಿಶುವಿಹಾರ ಮಡಂತ್ಯಾರು ಇವರ ಆಶ್ರಯದಲ್ಲಿ ಆಟೋ ಚಾಲಕಿಯರಿಗೆ ವಾಹನ ಚಾಲನ ಪರವಾನಿಗೆ ಹಾಗೂ ಹೊಲಿಗೆ ತರಬೇತಿ ದಾರರರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮಹಿಳಾ ಮಂಡಲ (ರಿ )ಶಿಶು ವಿಹಾರ ಕೇಂದ್ರ ದ ಸಭಾಭಾವನದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾವಲಂಬಿ ಯಾಗಬೇಕು ಎಲ್ಲರಿಗೂ ಸರಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ ಹಾಗೆಯೇ ಎಲ್ಲರೂ ಇಷ್ಟ ಪಡುವ ಕೃಷಿಕರಾಗಲು ಸಾಧ್ಯವಿಲ್ಲ ಆದ್ದರಿಂದ ಸ್ವಉದ್ಯೋಗ ಮಾಡಿ ಹೆಮ್ಮೆಯಿಂದ ದುಡಿದು ತನ್ನ ಕಾಲ ಮೇಲೆ ನಿಂತು ಯಾರಿಗೂ ಭಾರವಾಗದೆ ಜೀವಿಸ ಬಹುದು ಎಂದು ಹೇಳಿದರು.

ಆಟೋ ರಿಕ್ಷಾ ಹಾಗೂ ಕಾರ್ ಡ್ರೈವಿಂಗ್ ನ ಮಾಲಕರಾದ ಆನಂದ್ ರವರು ಹೆಣ್ಣು ಮಕ್ಕಳ ಮನಸು ಹೂವಿನ ಥರ. ಕೇವಲ ಅಡುಗೆ ಮನೆಗೇ ಸೀಮಿತವಾಗಿದ್ದ ಮಹಿಳೆಯರು ಸ್ವಾವಲಂಬಿಯಾಗಬೇಕೆಂದು ಛಲ ದಿಂದ ವಾಹನ ಚಾಲನ ತರಬೇತಿ ಯನ್ನು ಕಲಿತು ಸ್ವತಃ ಆಟೋ ಖರೀದಿಸಿ ಸ್ವಂತ ದುಡಿಮೆ ಯನ್ನು ಮಾಡುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಹಿಳಾ ಮಂಡಲ ದ ಅಧ್ಯಕ್ಷ ರಾದ ಶ್ರೀಮತಿ ಲೂಸಿ ಫೆರ್ನಾಂಡಿ ಸ್ ರವರು ವಹಿಸಿದ್ದರು.

ಮುಖ್ಯ ಅತಿಥಿ ಯಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಯೋಜನಾಧಿಕಾರಿ ಯಶವಂತ್ ಎಸ್ ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯಶೋಧ ಎಸ್ ಪೂಂಜ, ಆಟೋ ಚಾಲಕ ತರಬೇತಿ ದಾರರಾದ ಯೋಗೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ಆನಂದ್, ಯೋಗೀಶ್ ಹಾಗೂ ಟೈಲರಿಂಗ್ ಟೀಚರ್ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ದ ಸ್ವಾಗತವನ್ನು ಮಹಿಳಾಮಂಡಲದ ಕಾರ್ಯದರ್ಶಿಯಾದ ರೋಹಿಣಿ.ಸಿ. ಪಕಳರವರು ನೀಡಿದರು.

ಧನ್ಯವಾದವನ್ನು ಮಹಿಳಾ ಮಂಡಲದ ಕೋಶಾ ಧಿಕಾ ರಿಯಾದ ಸವಿತಾ ರವರು ನೀಡಿದರು ಹಾಗೂ ಕಾರ್ಯಕ್ರಮ ದ ನಿರೂಪಣೆ ಯನ್ನು ಜ್ಞಾನ ವಿಕಾಸ ಸಮನ್ವಯಧಿಕಾರಿ ಹರಿಣಿ ಯವರು ಮಾಡಿದರು.

Exit mobile version