ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಇದರ ವತಿಯಿಂದ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ 365 ಶಾಲೆಗಳಿಗೆ 2770 ಜೊತೆ ಡೆಸ್ಕ್-ಬೆಂಚ್‌ಗಳ ವಿತರಣೆ ಡಿ.4 ರಂದು ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕಾಯ೯ಕ್ರಮಕ್ಕೆ ಚಾಲನೆ ನೀಡಿ, ಶಾಲೆಗಳಿಗೆ ಆದೇಶ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ, ಡಿ.ಹಷೇಂದ್ರ ಕುಮಾರ್. ಡಾ| ಎಲ್.ಹೆಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು, ಎಸ್.ಕೆ.ಡಿ.ಆರ್.ಡಿ.ಪಿ, ಎ. ವೀರು ಶೆಟ್ಟಿ, ಆಪ್ತ ಕಾರ್ಯದರ್ಶಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ, ಅನಿಲ್ ಕುಮಾರ್ ಎಸ್.ಎಸ್. ಮುಖ್ಯ ನಿರ್ವಹಣಾಧಿಕಾರಿಗಳು, ಎಸ್.ಕೆ.ಡಿ.ಆರ್.ಡಿ.ಪಿ , ಹೇಮಂತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಿಗೆರೆ, ಆನಂದ ಸುವರ್ಣ ಪ್ರಾದೇಶಿಕ ನಿರ್ದೇಶಕರು, ಸಮುದಾಯ ಮತ್ತು ಅಭಿವೃದ್ಧಿ ವಿಭಾಗ, ಪುಷ್ಪರಾಜ್, ತಾಂತ್ರಿಕ ಯೋಜನಾಧಿಕಾರಿಗಳು, ಸಮುದಾಯ ಮತ್ತು ಅಭಿವೃದ್ಧಿ ವಿಭಾಗ, ಮೋಹನ್ ಕುಮಾರ್ ಮಾಲಕರು, ಲಕ್ಷ್ಮೀ ಇಂಡಸ್ಟ್ರೀಸ್, ಉಜಿರೆ., ಸುಂದರ ಗೌಡ ಮತ್ತು ಅಶ್ವತ್ ಮಾಲಕರು, ಶ್ರೀ ಚಿನ್ಮಯಿ ಇಂಡಸ್ಟ್ರೀಸ್ ಉಜಿರೆ, ಅರುಣ್ ಕುಮಾರ್ ಎಂ. ಮತ್ತು ಮಹಾಬಲ ನಾಯ್ಕ, ಮೇಲ್ವಿಚಾರಕರು, ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಸುನೀಲ್ ಶೆಟ್ಟಿ, ಸಹಾಯಕ ಪ್ರಬಂಧಕರು, ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಉಪಸ್ಥಿತರಿದ್ದರು.