ಪ್ರೆಂಡ್ಸ್ ಬೆಳ್ಳಾರೆ ವತಿಯಿಂದ ಕಮರಿದ ಕನಸಿಗೆ ನೆರವಿನ ಸಹಾಯ ಹಸ್ತ

0

 

ವಿಭಿನ್ನ ವೇಷ ಧರಿಸಿ ಪೇಟೆಯಲ್ಲಿ ಧನ ಸಂಗ್ರಹ

ಹಲವು ಸಾಂಸ್ಕ್ರತಿಕ,ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಫ್ರೆಂಡ್ಸ್ ಬೆಳ್ಳಾರೆ ತಂಡ “ಕಮರಿದ ಕನಸಿಗೆ ಮಿಡಿಯುವ ಮನಸ್ಸು” ಎಂಬ ಧ್ಯೇಯದೊಂದಿಗೆ ಕಷ್ಟದ ಕುಟುಂಬಕ್ಕೆ ಸಣ್ಣ ಆರ್ಥಿಕತೆಯ ನೆರವಾಗುವ ಉದ್ದೇಶವನ್ನಿಟ್ಟು ಕೊಂಡು ನವರಾತ್ರಿಯ ಒಂದು ದಿನ ವಿವಿಧ ವೇಷಭೂಷಣಗಳೊಂದಿಗೆ ಬೆಳ್ಳಾರೆ ಪೇಟೆ ಮತ್ತು ಆಸುಪಾಸಿನಲ್ಲಿ ತೆರಳಿ ಧನ ಸಂಗ್ರಹ ಮಾಡಲಾಯಿತು.

ಮತ್ತು ಗೂಗಲ್ ಪೇ ಮೂಲಕ ಒಟ್ಟು ಸಂಗ್ರಹವಾದ 55,000.00 ಮೊತ್ತವನ್ನು ಮೂರು ಕುಟುಂಬಗಳಿಗೆ, ಬೆಳ್ಳಾರೆ ಗ್ರಾಮದ ಮಂಡೇಪು ನಿವಾಸಿಯಾಗಿದ್ದು ಮರದಿಂದ ಬಿದ್ದು ಸೊಂಟದಿಂದ ಕೆಳಗೆ ತನ್ನ ಸ್ವಾಧೀನತೆಯನ್ನು ಕಳೆದುಕೊಂಡಿರುವ ರಮೇಶ್ ಪ್ರಭು ಇವರ ಚಿಕಿತ್ಸಾ ವೆಚ್ಚಕ್ಕಾಗಿ ರೂ 25,000.00 ಮತ್ತು ಪುತ್ತೂರು ತಾಲೂಕಿನ ಮಾಡಾವು ಬಾಡಿಗೆ ಮನೆಯಲ್ಲಿ ವಾಸವಿರುವ ಶ್ರೀಮತಿ ಬೇಬಿ ಇವರ ಕುಟುಂಬಕ್ಕೆ ರೂ. 5000.00ನಗದು ರೂಪದಲ್ಲಿ ಮತ್ತು ಕುಟುಂಬದ ಊಟ ಉಪಚಾರದ ಎಲ್ಲಾ ದಿನಸಿ ಸಾಮಾನುಗಳ ರೂ. 15000.00ದ ವರೆಗಿನ ಖರ್ಚನ್ನು ವಹಿಸಿಕೊಳ್ಳಲಾಗಿದೆ.

ಹಾಗೂ ರೂ. 10,000.00 ಮೊತ್ತ ವನ್ನು ಕಡಬ ತಾಲೂಕು ಮಲೆಕ್ಕಯಿ ಕಡಬ ಜೋಕಿಮ್ಸ್ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಆಕಾಶ್ ಕುಮಾರ್ ಅಸೌಖ್ಯದಿಂದ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಈ ವಿದ್ಯಾರ್ಥಿಯ ಚಿಕಿತ್ಸೆ ವೆಚ್ಚಕ್ಕಾಗಿ ನೀಡಲಾಗಿರುತ್ತದೆ. ಈ ಸಣ್ಣ ಸಹಾಯ ಹಸ್ತಕ್ಕೆ ವಿಶಾಲ ಮನಸ್ಸಿನಿಂದ ಹಲವಾರು ಜನರು ಕೈಜೊಡಿಸಿದ್ದು ವಿಭಿನ್ನ ಪ್ರಯತ್ನದಿಂದ ಚಿಕಿತ್ಸೆಗೆ ಸಹಾಯ ನೀಡುವುದರಲ್ಲಿ ಫ್ರೆಂಡ್ಸ್ ತಂಡ ಬೆಳ್ಳಾರೆ ಯಶಸ್ಸು ಕಂಡಿದ್ದಾರೆ.

 

LEAVE A REPLY

Please enter your comment!
Please enter your name here