Site icon Suddi Belthangady

ಗುತ್ತಿಗಾರು: ಅಡ್ಡನಪಾರೆಯ ಹೊಳೆ ಬದಿಯಲ್ಲಿ ಅನಾಥವಾಗಿ ಬಿದ್ದಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

 

ಗುತ್ತಿಗಾರು ವಳಲಂಬೆಯ ಅಡ್ಡನಪಾರೆ ಎಂಬಲ್ಲಿ ಹೊಳೆಯ ಬದಿಯಲ್ಲಿ ಬಂಡೆ ಕಲ್ಲಿನ ಮೇಲೆ ಬಿಸಿಲಲ್ಲಿ ಬಿದ್ದು ಹೊರಳಾಡುತ್ತಿದ್ದ ಅನಾಥ ವ್ಯಕ್ತಿಯನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಸೇರಿಸಿದ ಘಟನೆ ವರದಿಯಾಗಿದೆ.

 

ಸ್ಥಳೀಯರು ಚಂದ್ರಶೇಖರ ಕಡೋಡಿರವರಿಗೆ ಮಾಹಿತಿ ತಿಳಿಸಿದ್ದು ಅವರು ಅಮರ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ತಲುಪಿಸುವ ವೆವಸ್ಥೆ ಮಾಡಲಾಗಿದೆ.


ಪ್ರಥಮ ಚಿಕಿತ್ಸೆಯನ್ನು ಗುತ್ತಿಗಾರು ಸರಕಾರಿ ಆಸ್ಪತ್ರೆಯ ಸಿಸ್ಟರ್ ಸವಿತ , ಸಹಾಯಕ ತಿಮ್ಮಪ್ಪ ಗೌಡ, ಸಹಾಯಕಿ ಪ್ರೇಮಾ ರವರು ಪ್ರಥಮ ಚಿಕಿತ್ಸೆ ನೀಡಿದರು.

ವ್ಯಕ್ತಿಯನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲು ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್, ಮರಿಯಪ್ಪ ಮಾವಜಿ, ರಂಜಿತ್ ಪೈಕ, ರವೀಂದ್ರ ಹೊಸೊಳಿಕೆ, ಸುಕೇಶ್ ಅಡ್ಡನಾಪರೆ, ಗಂಗಾಧರ್ ಅಡ್ಡನಾಪರೆ, ಸುಧಾಕರ್ ಪಂಜಿಪಳ್ಳ, ಸೇವಾ ವಾಹನ ಚಾಲಕ ರಾಜೇಶ್ ಉತ್ರಂಬೆ ಸಹಕರಿಸಿದರು. ಚಿಂತಾಜನಕ ಸ್ಥಿತಿಯಲ್ಲಿದ್ದವರು ಇದೀಗ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚೇತರಿಕೆಯಲ್ಲಿ ಇರುವುದಾಗಿ ತಿಳಿದುಬಂದಿದೆ.

Exit mobile version