Site icon Suddi Belthangady

ಸುಬ್ರಹ್ಮಣ್ಯ ಗ್ರಾ.ಪಂ. ಉಪಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್ ಎನ್.ಎಸ್. ಗೆಲುವು

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಕಡಬ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಈ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್ ಎನ್.ಎಸ್. 69 ಮತಗಳಿಂದ ಗೆದ್ದುಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ದಿನೇಶ್ ರಾವ್ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವುಗೊಂಡಿತ್ತು. ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಜೇಶ್ ಎನ್.ಎಸ್. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ರಾವ್ ಕಣದಲ್ಲಿದ್ದರು. ಚುನಾವಣೆಯಲ್ಲಿ ರಾಜೇಶ್ 276 ಮತಗಳನ್ನು, ಸುಬ್ರಹ್ಮಣ್ಯ ರಾವ್ 207 ಮತಗಳನ್ನು ಪಡೆದರು. ರಾಜೇಶ್ ಗೆಲುವು ಸಾಧಿಸಿದರು. 8ಅಸಿಂಧು ಮತಗಳಾಗಿದ್ದವು.

Exit mobile version