Site icon Suddi Belthangady

ಡಾ.ಕುರುಂಜಿ ವೆಂಕಟರಮಣ ಗೌಡರ ಬಗ್ಗೆ ಡಾ. ಅನುರಾಧಾ ಕುರುಂಜಿಯವರು ಬರೆದ ಅರೆಬಾಷೆ ಕೃತಿ ಪ್ರಕಟ

 

ಸುಳ್ಯ ದ ಆಧುನಿಕ ಶಿಲ್ಪಿ, ಶಿಕ್ಷಣ ಬ್ರಹ್ಮ ಡಾ.ಕುರುಂಜಿ ವೆಂಕಟರಮಣ ಗೌಡರ ಜೀವನ ಸಾಧನೆಯನ್ನು ಪರಿಚಯಿಸುವ ಅರೆಭಾಷೆ ಪುಸ್ತಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಬಾಸೆ ಸಾಧಕರ ಮಾಲೆ ಅಡಿಯಲ್ಲಿ ಪ್ರಕಟಗೊಂಡಿದೆ.

ಉಪನ್ಯಾಸಕರಾದ ಡಾ.ಅನುರಾಧಾ ಕುರುಂಜಿಯವರು ಅರೆಭಾಷೆಯಲ್ಲಿ ಈ ಕೃತಿಯನ್ನು ರಚಿಸಿದ್ದು, ಇತ್ತೀಚೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಂಡಿತು. ಇವರು ಈಗಾಗಲೇ ಕುರುಂಜಿಯವರ ಬಗೆಗಿನ ಪ್ರಪ್ರಥಮ ಸ್ವತಂತ್ರ ಕೃತಿ ಮಲೆನಾಡಿನ ಸಾಂಸ್ಕೃತಿಕ ನಾಯಕ ಡಾ. ಕುರುಂಜಿ ವೆಂಕಟರಮಣ ಗೌಡ ಕೃತಿಯನ್ನು ರಚಿಸಿದ್ದು, ಇದು ಮರು ಮುದ್ರಣವನ್ನು ಕಂಡಿದೆ.

Exit mobile version