Site icon Suddi Belthangady

ಡಾ.ಪ್ರಭಾಕರ ಶಿಶಿಲರ ಕಾದಂಬರಿ ಚಿದಗ್ನಿ ಲೋಕಾರ್ಪಣೆ

 

ಆಧ್ಯಾತ್ಮಿಕವಾದ ಸಾಂಸ್ಕೃತಿಕ ಜ್ಞಾನದ ಅಭ್ಯುದಯಕ್ಕೆ ಸಾಹಿತ್ಯ ಕೃತಿಗಳ ಪಾತ್ರ ಅನನ್ಯ: ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ

ಕೃತಿಗಳ ಮೂಲಕ ಆಧ್ಯಾತ್ಮಿಕ ಪ್ರಭೆಯನ್ನು ಬೆಳಗಿಸುವುದು ಶ್ರೇಷ್ಠ ಕಾರ್ಯ.ಇದರಿಂದ ಜನತೆಯು ಪ್ರಾಚೀನತೆಯ ರೂಡಿ ಸಂಪ್ರದಾಯ ಗಳನ್ನು ಅರಿಯಲು ಪೂರಕವಾಗುತ್ತದೆ.ಪುಸ್ತಕಗಳನ್ನು ಓದುವುದು ಜ್ಞಾನ ಮತ್ತು ಮಾನಸಿಕ ಸಂತಸಕ್ಕೆ ಪೂರಕ.ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಯುವಂತೆ ಮಾಡಬೇಕು.ಇದರಿಂದ ಓದುವಿಕೆ ಮತ್ತು ಜ್ಞಾನಾರ್ಜನೆಯ ಹವ್ಯಾಸ ವೃದ್ದಿಯಾಗುತ್ತದೆ ಎಂದು ಕನ್ನಡದ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

 

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯ ದ ಎಸ್ ಎಸ್ ಪಿಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಅ.29 ರಂದು
ಡಾ.ಪ್ರಭಾಕರ ಶಿಶಿಲರ ವಿಶಿಷ್ಟ ಕಾದಂಬರಿ ಚದಗ್ನಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಸಾಹಿತ್ಯವು ಜೀವನದ ಆಗುಹೋಗುಗಳನ್ನು ಮತ್ತು ಅನುಭವಗಳನ್ನು ಬಿತ್ತರಿಸುವ ಮಾದ್ಯಮ.ಅನುಭವಗಳಿಂದ ಇತರರಿಗೆ ಪ್ರಯೋಜನವಾಗುತ್ತದೆ.ಸಾಹಿತ್ಯ ಕ್ಷೇತ್ರ ಮತ್ತು ಪುಸ್ತಕಗಳು ನಮ್ಮ ಜೀವನದ ಸುಗಮತೆಗೆ ದಾರಿದೀಪಗಳಾಗಿವೆ.ಆದುದರಿಂದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವತ್ತ ಗಮನ ನೀಡುವುದು ಉತ್ತಮ.ಪುಸ್ತಕಗಳು ಸದಾ ಸಂಪತ್ತುಗಳು ಅವುಗಳನ್ನು ಶೇಖರಿಸುವುದು ನಮ್ಮ ದಿನಚರಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ವಹಿಸಿದ್ದರು.
ಸಾಹಿತಿ ಡಾ.ಪ್ರಭಾಕರ ಶಿಶಿಲ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಯ ಅಧ್ಯಕ್ಷ ದೀಪಕ್ ನಂಬಿಯಾರ್, ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ರವಿ ಕಕ್ಕೆಪದವು, ಉಪನ್ಯಾಸಕಿಯರಾದ ಜಯಶ್ರೀ. ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಹಿತಿ, ಬರಹಗಾರ ಡಾ.ಪ್ರಭಾಕರ ಶಿಶಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Exit mobile version