Site icon Suddi Belthangady

ವಿಠಲ ಬಾರ್ಬರ್ ಬಾಳಿಲ ನಿಧನ

 

ಬಾಳಿಲ ಗ್ರಾಮದ ಮರಂಗಲ ವಿಠಲ ಬಾರ್ಬರ್ ಅಸೌಖ್ಯದಿಂದ ಅ. 26ರಂದು ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು.

ಇವರು ಸುಮಾರು 45 ವರ್ಷಗಳಿಂದ ಪಾಜಪಳ್ಳದಲ್ಲಿ ಸೆಲೂನ್ ನಡೆಸುತ್ತಿದ್ದರು. ಮೃತರು ಪತ್ನಿ ಶ್ರೀಮತಿ ಸುಶೀಲಾ, ಪುತ್ರಿಯರಾದ ಶ್ರೀಮತಿ ದೀಪಿಕಾ ಪೂವಯ್ಯ ಮರಂಗಲ, ಶ್ರೀಮತಿ ದೀಕ್ಷಿತಾ ದಯಾನಂದ್ ಕೋಟಿಕುಲಂ, ಸಹೋದರರಾದ ಸೀತಾರಾಮ ಕಲ್ಮಡ್ಕ, ನಿವೃತ್ತ ಎಸ್.ಐ. ಗೋಪಾಲ್, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕೃಷ್ಣ‌ ಎಂ, ಮೋಹನ್ ದೇಲಂಪಾಡಿ, ಸಹೋದರಿಯರಾದ ಶ್ರೀಮತಿ ಜಯಂತಿ ರವಿ ಮಡಿಕೇರಿ, ಶ್ರೀಮತಿ ವಿಜಯ ಜನಾರ್ಧನ್ ಐವರ್ನಾಡು ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version