Site icon Suddi Belthangady

ರೋಟರಿ ಕ್ಲಬ್ ವತಿಯಿಂದ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮ

ಕಲೆಯನ್ನು ಆಸ್ವಾದಿಸುವುದು ಹಾಗೂ ಪ್ರೋತ್ಸಾಹಿಸುವುದು ಜೀವನದಲ್ಲಿ ಸಂತೃಪ್ತಿಯನ್ನು ಹಾಗೂ ನೆಮ್ಮದಿಯನ್ನು ನೀಡುತ್ತದೆ . ಇದು ರೋಟರಿ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮದಿಂದ ಆಗಿದೆ ಎಂದು ಲಯನ್ ಮಾಜಿ ರಾಜ್ಯಪಾಲರಾದ ಎಂ.ಬಿ. ಸದಾಶಿವ ಹೇಳಿದರು.ಅವರು ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ನಡೆದ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮದ ಲ್ಲಿ ಕಲಾವಿದರಾದ ಕೆ.ಆರ್. ಗೋಪಾಲಕೃಷ್ಣ, ಮುರಳೀಧರ ಆಚಾರ್ಯ , ಪರೀಕ್ಷಿತ ನೆಲ್ಯಾಡಿ, ಬಾಲಕೃಷ್ಣ ನೆಟ್ಟಾರು ಹಾಗೂ ಶಶಿಧರ ಮಾವಿನಕಟ್ಟೆ ಇವರನ್ನು ಸನ್ಮಾನಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ಆರ್. ಗೋಪಾಲಕೃಷ್ಣ ಇವರ ಹಾಡಿಗೆ ಪೊಳಲಿಯ ಚಿತ್ರ ಕಲಾ ಶಿಕ್ಷಕ ಮುರಳೀಧರ ಆಚಾರ್ಯ ಕೃಷ್ಣ ಮತ್ತು ರಾಧೆಯ ಚಿತ್ರ ಬಿಡಿಸಿದರೆ, ಅಂತರರಾಷ್ಟ್ರೀಯ ಮಟ್ಟದ ಸ್ಟೆನ್ಸಿಲ್ ಆರ್ಟ್ ಕಲಾವಿದ ಪರೀಕ್ಷಿತ ನೆಲ್ಯಾಡಿ ಇವರು ಬಾಲಕೃಷ್ಣ ನೆಟ್ಟಾರು ಇವರ ಹಾಡಿಗೆ ಕುರುಂಜಿ ವೆಂಕಟ್ರಮಣ ಗೌಡ ಹಾಗೂ ಜಾನಕಿ ವೆಂಕಟ್ರಮಣ ಗೌಡ ಇವರ ಚಿತ್ರ ಬಿಡಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಶಶಿಧರ ಮಾವಿನಕಟ್ಟೆ ಇವರು ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ನಿರ್ದೇಶಕ ಮಾಧವ ಬಿ ಟಿ , ಕಾರ್ಯದರ್ಶಿಗಳಾದ ಮಧುರಾ ಎಂ ಆರ್, ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಸಿಟಿ ಅಧ್ಯಕ್ಷ ಮುರಳೀಧರ ರೈ ವಂದಿಸಿದರು.

Exit mobile version