Site icon Suddi Belthangady

ಸುಬ್ರಹ್ಮಣ್ಯ: “ದೀಪಾವಳಿ ಹಬ್ಬದೊಂದಿಗೆ ಸಾಮರಸ್ಯದ ಮನ್ವಂತರ”

 

ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ

18 ಮನೆಗಳಲ್ಲಿ ಪರಮ ಪೂಜ್ಯ ಬಸವಮೂರ್ತಿ ಚೆನ್ನಯ್ಯ ಸ್ವಾಮೀಜಿ ಜ್ಯೋತಿ ಪ್ರಜ್ವಲನೆ

“ದೀಪಾವಳಿ ಹಬ್ಬದೊಂದಿಗೆ ಸಾಮರಸ್ಯದ ಮನ್ವಂತರ” ಸಾಮರಸ್ಯ ವಿಭಾಗ ಸುಬ್ರಹ್ಮಣ್ಯ ಇದರ ಆಶಯದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ ಸುಬ್ರಹ್ಮಣ್ಯ ಗ್ರಾಮದ ವಾಲಗದ ಕೇರಿಯ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಿಂದ ಜ್ಯೋತಿ(ತುಡರ್) ತರಲಾಯಿತು. ಅಣ್ಣಿ ವಾಲಗದ ಕೇರಿ, ಪತ್ನಿ ಲಲಿತಾ, ವಿಶ್ವನಾಥ, ಗುರಿಕಾರ ಹುಕ್ರ ಜ್ಯೋತಿಯನ್ನು ತಂದಿದ್ದು ವಾದ್ಯ, ಚೆಂಡೆ,ಶಂಖ, ಜಾಗಟೆಯ ಅದ್ದೂರಿ ಮೆರವಣಿಗೆಯಲ್ಲಿ ವಾಲಗದಕೇರಿ ಬರಲಾಯಿತು. ಅಲ್ಲಿ 18 ಮನೆಗಳಲ್ಲಿ ಪರಮ ಪೂಜ್ಯ ಬಸವಮೂರ್ತಿ ಚೆನ್ನಯ್ಯ ಸ್ವಾಮೀಜಿ ಜ್ಯೋತಿ ಪ್ರಜ್ವಲಿಸಿ ಮನೆಯವರಿಗೆ ಹರಸಿದರು. ಇದೇ ವೇಳೆ ಮನೆಯ ಸದಸ್ಯರಿಗೆ ಮಹಿಳೆಯರಿಗೆ ಸೀರೆ, ಪುರುಷರು ವಸ್ರ್ತ, ಹಣ್ಣು ಹಂಪಲು ಹಂಚಲಾಯಿತು.

ಮನೆ ಮಂದಿ ಸ್ವಾಮೀಜಿಯವರಿಗೆ ಕಾಲಿಗೆ ಎರಗಿ, ಹಾರ ಹಾಕಿ ಆಶೀರ್ವಾದ ಪಡೆದರು. ಈ ಸಂದರ್ಭಗಳಲ್ಲಿ ಸಚಿವ ಎಸ್ ಅಂಗಾರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ, ನಾ ಸೀತಾರಾಂ, ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ ತೀರ್ಥರಾಮ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನದರ್ಬೆ, ಶೋಬಾ ಗಿರಿಧರ್, ವನಜಾ ಭಟ್, ರಾಷ್ಟ್ರೀಯ ಸಂಘದ ಕಜಂಪ್ಪಾಡಿ ಸುಬ್ರಹ್ಮಣ್ಯ ಭಟ್, ನಾ ಸೀತಾರಾಂ, ಸುಭಾಷ್ ಕಳಂಜ, ಮುಖಂಡರಾದ ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಚಂದ್ರಶೇಖರ ತಳೂರು, ಮನೋಜ್, ಶ್ರೀಕುಮಾರ್, ಅಶೋಕ್ ಆಚಾರ್ಯ, ದಿನೇಶ್ ಸಂಪ್ಯಾಡಿ, ಚಂದ್ರಶೇಖರ, ಅಚ್ಯುತ ಗೌಡ, ಗಿರಿಧರ ಸ್ಕಂದ, ಮೋನಪ್ಪ ಮಾನಾಡು, ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಬಳಿ ಗೋ ಪೂಜೆ ಬಳಿಕ, ಭಾರತ ಮಾತೆಗೆ ಪೂಜೆ ಸಲ್ಲಿಸಿ
ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪರಮ ಪೂಜ್ಯ ಬಸವಮೂರ್ತಿ ಚೆನ್ನಯ್ಯ ಸ್ವಾಮೀಜಿ, ಸಚಿವ ಎಸ್ ಅಂಗಾರ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಪ್ರಾಂತ ಸಂಚಾಲಕ ನಾ ಸೀತಾರಾಮ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಆದಿ ದ್ರಾವಿಡ ಸಮುದಾಯದ ಗುರಿಕಾರ ಹುಕ್ರ ವಾಲಗದ ಕೇರಿ ವೇದಿಕೆಯಲ್ಲಿದ್ದರು. ಸಭಾ ಕಾರ್ಯಕ್ರಮ ಮಧ್ಯೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಪೋಟೋ : ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ

Exit mobile version