Site icon Suddi Belthangady

ಕೆವಿಜಿ ಸುಳ್ಯ ಹಬ್ಬ ಸಮಿತಿ ವತಿಯಿಂದ

 

 

ಕೆವಿಜಿ ವೈದ್ಯಕೀಯ ವಿದ್ಯಾ ಸಂಸ್ಥೆಗಳ ಸಹಭಾಗಿತ್ವದಲ್ಲಿ

ಅ. 30 ರಂದು ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕೆವಿಜಿ ವೈದ್ಯಕೀಯ ವಿದ್ಯಾಸಂಸ್ಥೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅಕ್ಟೋಬರ್ ೩೦ ರಂದು ಆದಿತ್ಯವಾರ ದೇವಚಳ್ಳ ಗ್ರಾಮದ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಈ ಸಂಬಂಧ ಪೂರ್ವಭಾವಿ ಸಭೆ ಅಕ್ಟೋಬರ್ 20 ರಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ವಹಿಸಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಲೋಚನಾ ದೇವ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧನಂಜಯ ಎರ್ಮೆಟ್ಟಿ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್, ಎಸ್ ಡಿಎಂಸಿ ಸದಸ್ಯ ಧನಂಜಯ ಬಾಳೆತೋಟ, ಗ್ರಾಮ ಪಂಚಾಯಿತಿ ಸದಸ್ಯ ವೇಣುಗೋಪಾಲ ಪುಣ್ಕುಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಂಚಾಲಕ ಶೈಲೇಶ್ ಅಂಬೆಕಲ್ಲು, ಕೆವಿಜಿ ಸುಳ್ಯ ಹಬ್ಬ ಸಮಿತಿ ಉಪಾಧ್ಯಕ್ಷ ಹರೀಶ್ ಬಂಟ್ವಾಳ್ ಹಾಗೂ ಡಾ. ಎನ್. ಎ. ಜ್ಞಾನೇಶ್ ವೇದಿಕೆಯಲ್ಲಿದ್ದರು.
ಶಿಬಿರದ ಕುರಿತು ಶೈಲೇಶ್ ಅಂಬೆಕಲ್ಲು ಹಾಗೂ ದೊಡ್ಡಣ್ಣ ಬರೆಮೇಲು ವಿವರಿಸಿದರು.


ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಅಮರಮುಡ್ನೂರು ಗ್ರಾಮಗಳ ಜನತೆ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಯಿತು. ಶಿಬಿರದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಕೆವಿಜಿ ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು, ಡೆಂಟಲ್ ಕಾಲೇಜುಗಳ ತಜ್ಞ ವೈದ್ಯರುಗಳು ಹಾಗೂ ಸಹಾಯಕರು ಒಟ್ಟು 80 ಮಂದಿ ಶಿಬಿರಕ್ಕೆ ಬರಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ತಪಾಸಣೆ ನಡೆಸಲಿದ್ದಾರೆ. ಜನರಲ್ ಮೆಡಿಸಿನ್, ಶಸ್ತ್ರಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಕಿವಿ, ಗಂಟಲು, ಕಣ್ಣು, ಚರ್ಮ, ಲೈಂಗಿಕ ರೋಗ, ಎಲುಬು, ಕೀಲು, ದಂತವೈದ್ಯರುಗಳು ಬರಲಿದ್ದಾರೆಂದು ಆಯೋಜಕರು ತಿಳಿಸಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

Exit mobile version