Site icon Suddi Belthangady

ಕೆ.ವಿ.ಜಿ .ಐ.ಟಿ.ಐ ಯ ಮೋಟಾರ್ ಮೆಕಾನಿಕ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ

 

 

ಕೆ.ವಿ.ಜಿ ಐ.ಟಿ.ಐ ಯ ವಿದ್ಯಾರ್ಥಿಗಳಿಗೆ ವೈಕ್ತತ್ವ ವಿಕಸನ ತರಭೇತಿ ಅ. 14ರಂದು ನೀಡಲಾಯಿತು. ಕಾರ್ಯಕ್ರಮವನ್ನು ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ಸ್ಮಾರ್ಟ್ ಕ್ಲಾಸಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ಮಾಣಾಧಿಕಾರಿಗಳಾದ ಡಾ.ಉಜ್ವಲ್ ಊರುಬೈಲ್ ಮಾತನಾಡಿ ವಿದ್ಯಾರ್ಥಿಗಳು ತನ್ನ ವೃತ್ತಿ ಜೀವನದಲ್ಲಿ ಆಧುನಿಕತೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಂತಹ ತರಬೇತಿ ಅತೀ ಅಗತ್ಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದಲ್ಲಿ ಎಲ್ಲರಿಗೂ ಉದ್ಯೋಗ ಒದಗಿಸಿಕೊಡುವ ಜವಾಬ್ದಾರಿ ನಮಗಿರಲಿ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಶುಭಹಾರೈಸಿ ಇಂತಹ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಆಡಳಿತ ಮೂಲಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೆ.ವಿ.ಜಿ ಪಾಲಿಟೆಕ್ನಿಕ್ ಉಪ ಪ್ರಾಂಶುಪಾಲರು, ಶ್ರೀಧರ ಎಮ್. ಕೆ, ಕೆ.ವಿ.ಜಿ ಆಟೋಮೊಬೈಲ್ ಮುಖ್ಯಸ್ಥರಾದ ಚಂದ್ರಶೇಖರರವರು ಮತ್ತು ಕೆ.ವಿ.ಜಿ.ಐ.ಟಿ.ಐ ಯ ತರಬೇತಿ ಅಧಿಕಾರಿಗಳಾದ ದಿನೇಶ್ ಮಡ್ತಿಲ ಉಪಸ್ಥಿತಿರಿದ್ದರು. ತರಬೇತಿಗಾಗಿ ಕೆ.ವಿ.ಜಿ ತರಬೇತಿ ಸಂಸ್ಥೆಯ ಸುಳ್ಯ ಮತ್ತು ಭಾಗಮಂಡಲದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಿರಿಯ ತರಭೇತಿ ಅಧಿಕಾರಿಗಳಾದ ಹೊನ್ನಪ್ಪ ಹಾಗೂ ಭಾಸ್ಕರ್ ಸಂಯೋಜಿಸಿದ್ದರು.

ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಛೆರಿ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಪ್ರವೀಣ್ ಕುಮಾರ್ ವಂದಿಸಿದರು.

Exit mobile version