Site icon Suddi Belthangady

ಸುಬ್ರಹ್ಮಣ್ಯ ಗ್ರಾಂ.ಪಂ ನ ರಘು ಎನ್ .ಬಿ ಕಾರ್ಯದರ್ಶಿಯಾಗಿ ನೇಮಕ

 

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಕಳೆದ 20 ವರ್ಷಗಳಿಂದ ಕರ್ತವ್ಯದಲ್ಲಿದ್ದ ರಘು ಎನ್ ಬಿ ಅವರು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ ಬಿಲ್ ಕಲೆಕ್ಟರ್ ಕರ್ತವ್ಯ ಆರಂಭಿಸಿದ ಇವರು ಮುಂದಿನ ದಿನಗಳಲ್ಲಿ ಬಳ್ಪ ಗ್ರಾ. ಪಂ ನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗ್ರಾ.ಪಂ ಗಳಲ್ಲಿ ಹಲವು ವರ್ಷಗಳಿಂದ ದುಡಿದ ಹಿನ್ನೆಲೆಯಲ್ಲಿ ಸಿನಿಯಾರಿಟಿ ಆಧಾರದಲ್ಲಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಗ್ರಾ.ಪಂ ಗಳ ಸಿಬ್ಬಂದಿಗಳನ್ಮು ರಾಜ್ಯ ಸರ್ಕಾರದ ನೌಕರನಾಗಿ ನೇಮಕ ಮಾಡುವ ವ್ಯವಸ್ಥೆಯಿದ್ದು ಅದರಂತೆ ಈ ನೇಮಕ ನಡೆದಿದೆ. ರಘು ಅವರು ಸುಬ್ರಹ್ಮಣ್ಯ ಗ್ರಾಮದ ದಿ। ಬಾಬು ನಾಯ್ಕ ನೂಚಿಲ ಅವರ ಪುತ್ರ ಇವರ ಪತ್ನಿ ಶ್ರೀಮತಿ ಪ್ರೇಮ ಬಿ ಮಕ್ಕಳು ಸಂದೀಪ್ ಮತ್ತು ಮುಕೇಶ್.

Exit mobile version