Site icon Suddi Belthangady

ಪಂಜ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ

 


ಪಂಜದ ಬಸ್ತಿಕಾಡು ಎಂಬಲ್ಲಿ ಅ.11 ರಂದು ಸಂಜೆ ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಹಾನಿಯಾದ ಘಟನೆ ವರದಿಯಾಗಿದೆ.
ಕೂತ್ಕುಂಜ ಗ್ರಾಮದ ಬಸ್ತಿಕಾಡು ಚೋಮು ಎಂಬವರ ಮನೆಗೆ ಸಿಡಿಲು ಅಪ್ಪಳಿಸಿದ್ದು ವಿದ್ಯುತ್ ಮೀಟರ್ ಸಿಡಿದು ಎಸೆಯಲ್ಪಟ್ಟಿದೆ .ವಿದ್ಯುತ್ ಮೈನ್ ಸ್ವಿಚ್ ಮತ್ತು ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದೆ. ಎರಡು ಕೋಣೆಗಳ
ಗೋಡೆಗಳನ್ನು ದಾಟಿ ಸಿಡಿಲಿನ
ಬೆಂಕಿ ಹಾದು ಹೋಗಿರುವುದು ಕಾಣಿಸಿದೆ. ಸಿಡಿಲಿನ ಅಬ್ಬರಕ್ಕೆ ಮನೆಯಲ್ಲಿದ್ದವರು ಪಾರಾಗಿದ್ದು, ಚೊಮು ಅವರ ಕಿವಿಯ ಒಳ ಭಾಗಕ್ಕೆ ಹಾನಿಯಾಗಿದ್ದು ಅವರು ಅ.12 ಚಿಕಿತ್ಸೆಗಾಗಿ ಸುಳ್ಯ ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದು ಬಂದಿದೆ.

Exit mobile version