Site icon Suddi Belthangady

ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್‌ನಲ್ಲಿ ದಸರಾ ಈಜು ಶಿಬಿರ ಸಮಾರೋಪ

 

 

ಸುಳ್ಯದ ಕುರುಂಜಿಭಾಗ್‌ನಲ್ಲಿರುವ ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್‌ನಲ್ಲಿ ೧೦ ದಿನಗಳಿಂದ ನಡೆಯುತ್ತಿದ್ದ ದಸರಾ ಈಜು ಶಿಬಿರ ಅ.೧೦ ರಂದು ಸಮಾರೋಪಗೊಂಡಿತು. ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ|ರೇಣುಕಾ ಪ್ರಸಾದ್ ಕೆ.ವಿ. ಯವರ ಆಶಯದಂತೆ, ಈಜುಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಸರಾ ಈಜು ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

 

ಸಮಾರಂಭದಲ್ಲಿ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಉಜ್ವಲ್ ಯು.ಜೆ. ಮಾತನಾಡಿ, ಇವತ್ತು ಸುಳ್ಯದಂತಹ ಪರಿಸರದಲ್ಲಿ ಈಜು ತರಬೇತಿ ಅತ್ಯವಶ್ಯಕ.ಪೋಷಕರು ತಮ್ಮ ಮಕ್ಕಳನ್ನು ಪಟ್ಟಣಗಳಿಗೆ ಕಳುಹಿಸದೆ ಎಲ್ಲಾ ಸೌಲಭ್ಯಗಳು ಸುಳ್ಯದಲ್ಲೇ ದೊರಕುವಂತಾಗಬೇಕೆಂದು ಅಭಿಪ್ರಾಯಪಟ್ಟರು. ಬಳಿಕ ಶಿಬಿರಾರ್ಥಿಗಳಿಗೆ ಸಾಧನಾಪತ್ರ ವಿತರಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳಒಟ್ಟು ೨೮ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆ.ವಿ.ಜಿ.ಐ.ಪಿ.ಎಸ್.ನಪ್ರಾಂಶುಪಾಲ ಅರುಣ್‌ಕುಮಾರ್, ಈಜುಕೊಳದ ಅಧ್ಯಕ್ಷ ಡಾ|ಕುಸುಮಾಧರ್, ಈಜು ತರಬೇತುದಾರರುಗಳಾದ ಯಶವಂತಕುಮಾರ್ ಮತ್ತು ಫ್ರಾನ್ಸಿನ ಕು|ಸಲೋಮಿ, ಪೋಷಕರು ಹಾಗು ಈಜು ಕೊಳದ ಸಮಿತಿಯ ಸದಸ್ಯರು ಹಾಜರಿದ್ದರು.

Exit mobile version