Site icon Suddi Belthangady

ಅರಂತೋಡು : ತೆಕ್ಕಿಲ್ ಹೆಚ್ ಪಿ ಗ್ಯಾಸ್ ಏಜೆನ್ಸಿ ವತಿಯಿಂದ ಎಲ್.ಪಿ.ಜಿ. ಪಂಚಾಯತ್ ಕಾರ್ಯಕ್ರಮ

 

ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ, ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ಅರಂತೋಡು ಇದರ ವತಿಯಿಂದ ಗ್ಯಾಸ್ ಸುರಕ್ಷರತೆ ಬಗ್ಗೆ ಎಲ್.ಪಿ.ಜಿ ಪಂಚಾಯತ್ ಕಾರ್ಯಕ್ರಮವು ಅಕ್ಟೋಬರ್ 1 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ತೆಕ್ಕಿಲ್ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನುರಾಜ ಊರುಪಂಜ ಮಾತನಾಡಿ ಪಲಾನುಭವಿಗಳು ಎಲ್.ಪಿ.ಜಿ ಸಿಲಿಂಡರ್ ಬಳಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕ್ರಮದ ಬಗ್ಗೆ ಮಾಹಿತಿ ನೀಡಿದರು ಹಾಗೂ ಉರುವಲು ಮತ್ತು ಜೈವಿಕ ಇಂಧನದಿಂದ ಬಿಡುಗಡೆಯಾಗುವ ಹೊಗೆಯಿಂದ ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕರ ಆದುದರಿಂದ ಪ್ರತಿಯೊಬ್ಬರು ಎಲ್.ಪಿ.ಜಿ ಯನ್ನೆ ಬಳಸಬೇಕೆಂದರು. ತೆಕ್ಕಿಲ್ ಗ್ಯಾಸ್ ಏಜೆನ್ಸಿಯ ಅಶ್ರಫ್ ಗುಂಡಿಯವರು ಗ್ಯಾಸ್ ಸುರಕ್ಷತೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಎನ್.ಎಸ್.ಎಸ್.ಅಧಿಕಾರಿ ಗೌರಿ ಶಂಕರ್ , ಸಹಾಯಕ ಎನ್.ಎಸ್.ಎಸ್ ಅಧಿಕಾರಿ ಲಿಂಗಪ್ಪ, ಉಮೇಶ್ ವಾಗ್ಲೆ, ಸಂಪನ್ಮೂಲ ವ್ಯಕ್ತಿ ಚಿದಾನಂದ ಮಾಸ್ಟರ್ ಗೂನಡ್ಕ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸಹಾಯಕ ಅಧಿಕಾರಿ ಮೋಹನ್ ಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Exit mobile version