Site icon Suddi Belthangady

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ವತಿಯಿಂದ ಪೊಲೀಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ

ದ. ಕ. ಜಿಲ್ಲಾ ಯುವಕ ಯುವತಿಯರು ಪೊಲೀಸ್ ಇಲಾಖೆ ಸೇರಬೇಕು ಎಂಬ ಪರಿಕಲ್ಪನೆಯಲ್ಲಿ ಪೊಲೀಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ ಅ. 7 ರಂದು ಗುತ್ತಿಗಾರಿನಲ್ಲಿ ನಡೆಯಿತು.

ಕಾರ್ಯಾಗಾರವನ್ನು ಬೆಂಗಳೂರಿನ ಸುಬ್ರಮಣ್ಯ ನಗರ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕೊಲ್ಯ
ರವರು ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ನಿರೀಕ್ಷೆಗೂ ಮೀರಿ ಯುವಕ ಯುವತಿಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ಧನಪತಿ , ನಿವೃತ್ತ ದೈ. ಶಿ. ಶಿಕ್ಷಕ ದಯಾನಂದ ಮುತ್ಲಾಜೆ, ಗುತ್ತಿಗಾರು. ರ. ಬೆ. ಸ. ಸಂಘದ ನಿರ್ದೇಶಕ ಲೋಕೇಶ್ವರ ಡಿ. ಆರ್, ಅಮರ ಸಂಜೀವಿನಿ ಘಟಕದ ಅಧ್ಯಕ್ಷೆ ದಿವ್ಯಾ ಸುಜನ್ ಗುಡ್ಡೆಮನೆ, ಗುತ್ತಿಗಾರ್ ಪಂಚಾಯತ್ ಗ್ರಂಥಾಲಯ ಪಾಲಕಿ ಅಭಿಲಾಷ ಶಿವಪ್ರಕಾಶ್, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರ ಮುಗಿದ ನಂತರ ಪ್ರದೀಪ್ ಕೊಲ್ಯ ರವರು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಭೇಟಿ ಮಾಡಿದರು. ಅಲ್ಲಿಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಪೊಲೀಸ್ ಹುದ್ದೆಗೆ ತಯಾರಿ ನಡೆಸಿದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಇನ್ನೂ ಹೆಚ್ಚಿನ ಬೆಲೆಬಾಳುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವ ಭರವಸೆ ನೀಡಿದರು.

 

Exit mobile version