Site icon Suddi Belthangady

ಸುಳ್ಯದಲ್ಲಿ ಟೀಮ್ ವರ್ಕ್ ಡೆವಲಪರ್ಸ್ ಶುಭಾರಂಭ

 

ವಿಶ್ವಾಸಾರ್ಹ ಸೇವೆಗೆ ಯಾವತ್ತೂ ಬೇಡಿಕೆ ಇರುತ್ತದೆ: ಎಂ ವಿ ಜಿ

ಪುತ್ತೂರಿನಲ್ಲಿ ಹಲವಾರು ವರ್ಷಗಳಿಂದ ಕನ್ಸ್ಟ್ರಕ್ಷನ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರಂಜಿತ್ ಬಂಗೇರ ಮತ್ತು ಶಮೀರ್‌ ಬಾಯಂಬಾಡಿ ಮಾಲಕತ್ವದ ಟೀಮ್ ವರ್ಕ್ ಡೆವಲಪರ್ಸ್ ಇದರ ಸುಳ್ಯ ಶಾಖೆ ಮೊಗರ್ಪಣೆ ಹಾರಿಸ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಅ.3 ರಂದು ಶುಭಾರಂಭಗೊಂಡಿತ್ತು.
ಮೊಗರ್ಪಣೆ ಮಸೀದಿ ಅಧ್ಯಕ್ಷರು ಕಟ್ಟಡ ಮಾಲಕರಾದ ಹಾಜಿ ಜಿ ಇಬ್ರಾಹಿಂ ಸೀಪುಡ್ ಉದ್ಘಾಟಿಸಿದರು.


ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದರು.
ನ.ಪಂ ಮಾಜಿ ಅಧ್ಯಕ್ಷ ನ್ಯಾಯವಾದಿ ಎಂ ವೆಂಕಪ್ಪ ಗೌಡ ಸಂಸ್ಥೆಯ ಲೋಗೋ ಅನಾವರಣಗೊಳಿಸಿದರು.
ಸುಳ್ಯ ವರ್ತಕರ ಸಂಘದ ಪಿ ಬಿ ಸುಧಾಕರ ರೈ ಅದ್ಯಕ್ಷತೆ ವಹಿಸಿದ್ದರು.

ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ,ಕ್ಯಾನ್ಸರ್ ತಜ್ಞ ಡಾ.ರಘು, ನಿವೃತ್ತ ಅರಣ್ಯಾಧಿಕಾರಿ ಕೃಷ್ಣ ಬಂಗೇರ,ವೆನ್ಲಾಕ್ ಆಸ್ಪತ್ರೆ ನಿವೃತ್ತ ಶುಶ್ರೂಷಕಿ ರತ್ನಾ.ಕೆ,ಅಬ್ದುಲ್‌ ಖಾದರ್, ಅನ್ಸಾರಿಯ ಜಿಸಿಸಿ ಕೋಶಾಧಿಕಾರಿ ಹಾಜಿ ಹಮೀದ್ ಎಸ್ ಎಂ,ಪುತ್ತೂರು ನಗರಸಭೆ ಸದಸ್ಯ ರಿಯಾಜ್,ಹಾಜಿ ಅಜೀಜ್ ಬುಶ್ರಾ,ಹೀರಾ ಅಬ್ದುಲ್‌ ಖಾದರ್ ಹಾಜಿ,ಅಜಿತ್ ಕರ್ಕುಂಜ,ಪ್ರಹ್ಲಾದ್ ಬೆಳ್ಳಿಪ್ಪಾಡಿ,ಶಾಕಿರ್ ಬಾಯಂಬಾಡಿ,ಲತೀಫ್ ಹರ್ಲಡ್ಕ,ಎಸ್ ಪಿ ಅಬೂಭಕ್ಕರ್,ಆಶಿಫ್ ಅಹ್ಮದ್,ಅಬಿಷೇಕ್ ಬೆಳ್ಳಿಪ್ಪಾಡಿ,ಗ್ಯಾಲಕ್ಸಿ ಅಶ್ರಫ್ ಮುಕ್ವೆ,ನವಾಜ್ ಬೆಳ್ಳಾರೆ,ಅಬ್ದುಲ್ಲಾ ಕುಂಡಡ್ಕ,ನವೀನ್ ಐವರ್ನಾಡು,ಉಸ್ಮಾನ್ ಅಡ್ಕಾರ್ ,ಅಬ್ದುಲ್‌ ಕಲಾಂ ಕಟ್ಟೆಕ್ಕಾರ್,ಆಲಿ ಹಾಜಿ ಕೊಡಿಂಬಾಳ,ಕಲಂದರ್ ಕೊಡಿಂಬಾಳ,ಮೊದಲಾದವರು ಉಪಸ್ಥಿತರಿದ್ದರು.
ರಂಜೀತ್ ಬಂಗೇರ ಮತ್ತು ಶಮೀರ್ ಸರ್ವರನ್ನೂ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ಗಳಾದ ಚರಣ್,ಶರತ್,ಸುಚಿತ್ ಸಂಸ್ಥೆಯ ಸೂಪರ್ ವೈಸರ್ ಗಳಾದ ಬಸವ,ಆರ್ಕಿಟೆಕ್ಚರ್ ಶಪೀಕ್ ,ಮಹಮ್ಮದ್ ನಾಸೀರ್ ಸಹಕರಿಸಿದರು.


ಟೀಮ್ ಡೆವಲಪರ್ಸ್ ನವರು ಕಂಟ್ರಾಕ್ಟ್ ಕೆಲಸ,ಆರ್ಕಿಟೆಕ್ಚ್ ,ಮನೆ ಇನ್ನಿತರ ಕಟ್ಟಡಗಳ ಒಳ ಮತ್ತು ಹೊರ ವಿನ್ಯಾಸ, ಕಟ್ಟಡ ವಿನ್ಯಾಸ, ಕಟ್ಟಡ ಪರವಾನಿಗೆ,ಕಟ್ಟಡಗಳ ಅಂದಾಜು ಪಟ್ಟಿ, ಇಂಜಿನಿಯರ್ ಗಳ ಸಮಾಲೋಚನೆ, ಆನ್ಲೈನ್ ಕಟ್ಟಡ ಪರವಾನಿಗೆ, ಪ್ಲಾನಿಂಗ್,ಎಸ್ಟಿಮೆಶನ್,ಕಟ್ಟಡ ಸಂಬಂಧಿಸಿದ ಎಲ್ಲಾ ಕೆಲಸಗಳ ಮಾಹಿತಿಯೊಂದಿಗೆ ಕಟ್ಟಡ ನಿರ್ಮಾಣ ಕೆಲಸಗಳನ್ನು ಟೀಮ್ ವರ್ಕ್ ಡೆವಲಪರ್ಸ್ ಮಾಡಿಕೊಡುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ.

Exit mobile version