Site icon Suddi Belthangady

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

 

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿ ಸೆ.26 ರಿಂದ ಆರಂಭಗೊಂಡಿದ್ದು
ನವರಾತ್ರಿಯ ಉತ್ಸವವು ವಿವಿಧ ಧಾರ್ಮಿಕ ಕ್ರಿಯಾದಿಗಳೊಂದಿಗೆ ಜರಗುತ್ತಿದೆ.

ಸೆ.26 ಗಣ ಹೋಮ ನಡೆದಿದ್ದು . ಸೆ.30 ಬೆಳಗ್ಗೆ ಚಂಡಿಕಾ ಹೋಮ ಮತ್ತು ಸಾಮೂಹಿಕ ಕುಂಕುಮಾರ್ಚನೆ, ಲಲಿತಾ ಪಂಚಮಿ ನಡೆಯಿತು. ಅ. 1 ರ ಮಕ್ಕಳ ಅಕ್ಷರಾಭ್ಯಾಸ ಪ್ರಾರಂಭ ಆಗಿದೆ. ಅ.3 ದುರ್ಗಾಷ್ಠಮಿ ನಡೆಯಲಿದ್ದು . ಅ.4 ರಂದು ಮಹಾನವಮಿ, ಮಧ್ಯಾಹ್ನ ಮಹಾಪೂಜೆ, ಆಯುಧ ಪೂಜೆ,ರಾತ್ರಿ ರಂಗಪೂಜೆ, ಆಯುಧಪೂಜೆ ನಡೆಯಲಿದೆ. ಸೆ.5 ರಂದು ಮಹಾಪೂಜೆ, ವಿಜಯದಶಮಿ, ಶಮಿಪೂಜೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಭೋಜನ ನಡೆಯಲಿದೆ.
ಪ್ರತಿ ದಿನ ರಾತ್ರಿ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.

Exit mobile version