Site icon Suddi Belthangady

ಐವರ್ನಾಡು : ಶ್ರೀ ಶಾರದಾ ಪೂಜಾ ಮಹೋತ್ಸವ ಪ್ರಾರಂಭ

 

ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ

 

ಐವರ್ನಾಡು ಯುವಶಕ್ತಿ ಸಂಘದ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ 18 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.01 ರಂದು ಪ್ರಾರಂಭಗೊಂಡಿದ್ದು ಅ.02 ರವರೆಗೆ ಐವರ್ನಾಡು ಸ.ಹಿ.ಪ್ರಾ.ಶಾಲಾ ಶ್ರೀ ಮಾತಾಜಿ ಸಭಾಭವನದ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆಯಲಿದೆ.

 

 

 

ಬೆಳಿಗ್ಗೆ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಿತು.
ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ನಡೆಯುತ್ತಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.ಸಂಜೆ ಗಂಟೆ 6.30 ರಿಂದ “ಪ್ರಾಥಮಿಕ ಶಾಲಾ ಮಕ್ಕಳ ಹಾಗೂ ಅಂಗನವಾಡಿ ಮಕ್ಕಳ ಡ್ಯಾನ್ಸ್” ನಡೆಯಲಿದೆ.
ರಾತ್ರಿ ಗಂಟೆ 7.30 ರಿಂದ ಸಾಂಸ್ಕೃತಿಕ ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಎ.ಒ.ಎಲ್.ಇ.ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ,ವೆಂಕಟ್ರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಕೆ.ಟಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸಚಿನ್ ಪ್ರತಾಪ್ ರನ್ನು ಸನ್ಮಾನಿಸಲಾಗುವುದು.
ರಾತ್ರಿ ಗಂಟೆ ,9.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಅಮೋಘ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 9.00 ರಿಂದ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ತಂಡದಿಂದ “ಡ್ಯಾನ್ಸ್ ಡ್ಯಾನ್ಸ್” ನಡೆಯಲಿದೆ.
ಯುವಶಕ್ತಿ ಸಂಘದ ಸದಸ್ಯರಿಂದ “ಕಾರ್ಯಕ್ರಮ ವೈವಿಧ್ಯ”
ನಡೆಯಲಿದೆ.ಮಂಗಳೂರು ಲಕುಮಿ ತಂಡದ ತುಳು ಹಾಸ್ಯಮಯ ನಾಟಕ “ಲೇಲೆ ಪಾಡಡೆ ! ” ನಡೆಯಲಿದೆ.
ಅ.02 ರಂದು ಬೆಳಿಗ್ಗೆ ಗಂಟೆ 9.00 ರಿಂದ ಯುವಶಕ್ತಿ ಸದಸ್ಯರಿಂದ ಮತ್ತು ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ,ಅಕ್ಷರಾಭ್ಯಾಸ,ಆಯುಧ ಪೂಜೆ ನಡೆಯಲಿದೆ.
ಬೆಳಿಗ್ಗೆ ಶ್ರೀ ಗುರುಗಣಪತಿ ಯಕ್ಷಗಾನ ಮಂಡಳಿ ಧರ್ಮಾರಣ್ಯ ಅರಂಬೂರು ಇವರಿಂದ ಯಕ್ಷಗಾನ ತಾಳಮದ್ದಳೆ ” ಭೀಷ್ಮ ವಿಜಯ”ನಡೆಯಲಿದೆ.
ಮಧ್ಯಾಹ್ನ ಗಂಟೆ 1.00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.30 ರಿಂದ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆ ಐವರ್ನಾಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ ತಿಳಿಸಿದ್ದಾರೆ.

Exit mobile version