Site icon Suddi Belthangady

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಗಾಳಿಪಟ ದಿನ

 

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸೆ.28 ಮತ್ತು 29 ರಂದು ವಿದ್ಯಾರ್ಥಿಗಳ ಮನರಂಜನೆಗಾಗಿ ಗಾಳಿಪಟ ದಿನವನ್ನಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಇಂತಹ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಅವರಲ್ಲಿ ವಿವಿಧ ರೀತಿಯ ಅಭಿರುಚಿಗಳನ್ನು ಮೂಡಿಸುವುದು ಅತಿ ಮುಖ್ಯವೆಂದು ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ, ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಹೇಳಿದರು.

ಈ ಸಂದರ್ಭದಲ್ಲಿ ಎಲ್ ಕೆ ಜಿ ಯಿಂದ 5 ನೇ ತರಗತಿಯ ವರೆಗಿನ ಎಲ್ಲಾ ಮಕ್ಕಳು ಮನೆಯಿಂದ ಗಾಳಿಪಟವನ್ನು ಮಾಡಿಕೊಂಡು ಬಂದು ಅದರ ಬಗ್ಗೆ ಕೆಲವು ಮಾತುಗಳನ್ನು ಹೇಳಿ ಗಾಳಿಪಟವನ್ನು ಹಾರಿಸುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಎಲ್ಲಾ ಶಿಕ್ಷಕರು ಮಕ್ಕಳ ಜೊತೆಗಿದ್ದು ಪ್ರೋತ್ಸಾಹಿಸಿದರು.

 

Exit mobile version