Site icon Suddi Belthangady

ಅನ್ಸಾರಿಯದಲ್ಲಿ‌ ಗ್ರಂಥಾಲಯ ಉದ್ಘಾಟನೆ

ನುಸ್ರತ್ ವತಿಯಿಂದ ಪುಸ್ತಕ ಕೊಡುಗೆ

ಅನ್ಸಾರಿಯ ಎಜುಕೇಶನ್ ಸೆಂಟರ್ ನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಎಲಿಮಲೆ ಇದರ 40ನೇ ವಾರ್ಷಿಕ ಕಾರ್ಯಕ್ರಮದ ಸಲುವಾಗಿ ಸುಳ್ಯ ಅನ್ಸಾರಿಯ ಎಜುಕೇಶನ್ ಸೆಂಟರ್ ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಗ್ರಂಥಾಲಯಕ್ಕೆ ಕಪಾಟು ಹಾಗೂ ಇಪ್ಪತ್ತು ಸಾವಿರ ಬೆಲೆಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.


ಗ್ರಂಥಾಲಯವನ್ನು ಧಾರ್ಮಿಕ ಪಂಡಿತ ಅಮ್ಜದಿ ಉಸ್ತಾದವರು ಉದ್ಘಾಟಿಸಿದರು.
ಅನ್ಸಾರಿಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಎಲಿಮಲೆ ಜಮಾಯತ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಹಸ್ತಾಂತರ ಮಾಡಿದರು.
ನುಸ್ರತ್ ಅಧ್ಯಕ್ಷ ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ,ಅನ್ಸಾರಿಯ ವಿದೇಶ ಸಮಿತಿ ಸಂಯೋಜಕ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ,ಅನ್ಸಾರಿಯ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ದುವಾ ಮಾಡಿದರು.
ಅನ್ಸಾರಿಯ ದಹವ ಕಾಲೇಜು ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ ಶುಭ ಹಾರೈಸಿದರು.
ನುಸ್ರತ್ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಕಾರ್ಯಕ್ರಮ ನಿರೂಪಿಸಿದರು.
ಅನ್ಸಾರಿಯ ಅಧ್ಯಾಪಕರರು ಸಹಕರಿಸಿದರು.

Exit mobile version