Site icon Suddi Belthangady

ಕೇನ್ಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸೆ. 26ರಂದು ಆರಂಭಗೊಂಡಿದ್ದು, ಅ. 5ರ ತನಕ‌ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಜರಗಲಿದೆ. ನವರಾತ್ರಿಯ ಪ್ರತೀ ದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಸೆ. 26ರಂದು ಬೆಳಿಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ಇಂದು ರಾತ್ರಿ 8.30ರಿಂದ ಸಾಮೂಹಿಕ ದುರ್ಗಾಪೂಜೆ ನಡೆಯಲಿದೆ. ಸೆ. 28ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣು ದೇವರಿಗೆ ಹಾಲು ಪಾಯಸ ಸೇವೆ ನಡೆಯಲಿದೆ. ಸೆ. 29ರಂದು ಬೆಳಿಗ್ಗೆ ಗಣಪತಿ ದೇವರಿಗೆ ಅಪ್ಪಕಜ್ಜಾಯ ಸೇವೆ, ಸೆ. 30ರಂದು ಬೆಳಿಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ರಾತ್ರಿ ಸಮೂಹಿಕ ರಂಗಪೂಜೆ ನಡೆಯಲಿದೆ. ಅ. 1ರಂದು ಬೆಳಿಗ್ಗೆ ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ ನಡೆಯಲಿದೆ. ಅ. 2ರಂದು ಶಾರದಾ ಪೂಜಾರಂಭ, ಕದಿರು ಕಟ್ಟುವುದು ನಡೆಯಲಿದೆ. ಅ. 4ರಂದು ಮಹಾಪೂಜೆ, ಆಯುಧ ಪೂಜೆ, ರಾತ್ರಿ ರಂಗಪೂಜೆ ನಡೆಯಲಿದೆ. ಅ. 5ರಂದು ಮಧ್ಯಾಹ್ನ ಅಕ್ಷರಾಭ್ಯಾಸ, ಶಾರದಾ ವಿಸರ್ಜನೆ, ಮಹಾಪೂಜೆ, ಪ್ರಸಾದ ವಿತರಣೆ ನವಾನ್ನ ಭೋಜನ ನಡೆಯಲಿದೆ.

 

Exit mobile version