Site icon Suddi Belthangady

ಸುಳ್ಯ ತಾ. ಜೆಡಿಎಸ್‌ನ ಗ್ರಾಮ ಪ್ರಮುಖರ ಹಾಗೂ ವಿವಿಧ ಘಟಕದ ಅಧ್ಯಕ್ಷರ ಸಭೆ

ಸುಳ್ಯ ತಾಲೂಕು ಜೆಡಿಎಸ್ ಪಕ್ಷದ ಗ್ರಾಮ ಪ್ರಮುಖರ ಹಾಗೂ ವಿವಿಧ ಘಟಕದ ಅಧ್ಯಕ್ಷರ ಸಭೆಯು ಸೆ.19 ರಂದು ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷ ಸಂಘಟನೆ, ಗ್ರಾಮ ಸಮಿತಿಗಳ ರಚನೆ, ತಾಲೂಕು ಸಮಿತಿ ರಚನೆ, ಹಾಗೂ ಪಕ್ಷದ ನೂತನ ಕಚೇರಿ ಉದ್ಘಾಟನೆ, ಅಧ್ಯಕ್ಷರ ಪದಗ್ರಹಣ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಪಕ್ಷದ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಧವ ಗೌಡರವರು ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಜಿಲ್ಲಾ ಮಹಿಳಾ ಜೆಡಿಎಸ್ ಕಾರ್ಯಧ್ಯಕ್ಷೆ ಜ್ಯೋತಿ ಪ್ರೇಮಾನಂದ, ಜಿಲ್ಲಾ ಯುವ ಜೆಡಿಎಸ್ ನ ಕಾರ್ಯದರ್ಶಿ ಪ್ರವೀಣ್ ಮುಂಡೋಡಿ, ಮಾಜಿ ಎಪಿಎಂಸಿ ಉಪಾಧ್ಯಕ್ಷ ಪಿ.ಎ. ಉಮ್ಮರ್, ತಾ.ಪಂ. ಜಾತಿ ಹಾಗೂ ಪಂಗಡದ ಮಾಜಿ ಅಧ್ಯಕ್ಷ ಎಂ.ಬಿ.ಚೋಮ, ತಾಲೂಕು ಮಹಿಳಾ ಜನತಾ ದಳದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ಪಕ್ಷದ ಗ್ರಾಮಗಳ ಮುಖ್ಯಸ್ಥರಾದ ದಾಮೋದರ ನಾರ್ಕೋಡು, ದೇರಾಮ ಬಾಳಕಜೆ, ಎ.ಬಿ. ಮೊಯಿದ್ದೀನ್, ಲೋಲಾಕ್ಷ ಕಾರಿಂಜ, ಮಹಮ್ಮದ್ ಕನಕಮಜಲು, ಸುರೇಶ್ ಕುಮಾರ್ ನಡ್ಕ, ಹನೀಫ್ ಮೊಟ್ಟೆಂಗಾರ್, ರೋಹನ್ ಪೀಟರ್, ರಾಮಚಂದ್ರ ಉಬರಡ್ಕ, ದೇವರಾಮ ಬಾಳಕಜೆ, ಹಾಗೂ ತಾಲೂಕು ಯುವ ಜೆಡಿಎಸ್‌ನ ಅಧ್ಯಕ್ಷ ಮೋಹನ್ ಚಾಂತಾಳ ಉಪಸ್ಥಿತರಿದ್ದರು, ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿ, ವಂದಿಸಿದರು.

Exit mobile version