Site icon Suddi Belthangady

ಬಳ್ಪ : ಗ್ರಾಮಸಭೆ

ಬಳ್ಪ ಗ್ರಾ.ಪಂ.ನ 2022-23ನೇ ಸಾಲಿನ ಗ್ರಾಮಸಭೆ ಸೆ. 22ರಂದು ಬಳ್ಪ ಉನ್ನತೀಕರಿಸಿದ ಹಿರಿಯ ಪ್ರಾ.ಶಾಲಾ ಸಭಾಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಲಯರಣ್ಯಾಧಿಕಾರಿ ಮಂಜುನಾಥ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಬಳ್ಪ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿ.ಡಿ.ಒ. ನಾರಾಯಣ ಬಿ ಸ್ವಾಗತಿಸಿದರು. ಸಿಬ್ಬಂದಿ ಯೋಗೀಶ್ ಕುಳ ವರದಿ ವಾಚಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ, ಸದಸ್ಯರಾದ ರಾಜೀವ ಗೌಡ ಕಣ್ಕಲ್, ಹರ್ಷಿತ್ ಕಾರ್ಜ, ಚಂದ್ರಶೇಖರ ಅಕ್ಕೇಣಿ, ಪ್ರಶಾಂತ್ ಪೊಟ್ಟುಕೆರೆ, ದಿವಾಕರ ಎಣ್ಣೆಮಜಲು, ಶ್ರೀಮತಿ ಕುಸುಮಾ ಎಸ್.ರೈ, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸುನಿತಾ ಸಂಪ್ಯಾಡಿ, ಶ್ರೀಮತಿ ಪಿ.ಡಿ. ಪಾರ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ಕಲಾಪ‌ ನಡೆಸಿಕೊಟ್ಟರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Exit mobile version