Site icon Suddi Belthangady

ಹರಿಪುರ ಶಾಲೆಗೆ ಕೋಟೆ ಫೌಂಡೇಶನ್ ನಿಂದ ಬ್ಯಾಗ್ ವಿತರಣೆ

 

 

ಕೋಟೆ ಫೌಂಡೇಶನ್ ರೈಟ್ ಟೂ ಲೀವ್ ಮತ್ತು ಆಪ್ ಡೈನಾಮಿಕ್ಸ್ ( ಪಾರ್ಟ್ ಆಫ್ ಸಿಸ್ಕೊ ) ನಿಂದ ಸ. ಕಿ. ಪ್ರಾ. ಶಾಲೆ. ಹರಿಪುರ ಇಲ್ಲಿಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ಸೆ. 13 ರಂದು ನಡೆಯಿತು.

ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲತಾ ಕುಮಾರಿ ಮತ್ತು ಪತ್ರಕರ್ತರಾದ ಮಹೇಶ್ ಪುಚ್ಚಪಾಡಿಯವರು ಸಹಕರಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಾರದಾ, ಎಸ್. ಡಿ. ಎಂ. ಸಿ. ಅಧ್ಯಕ್ಷ ತೀರ್ಥಶ್ ಬಿ. ಹಾಗೂ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಜರಿದ್ದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಶ್ರೀದೇವಿ ಸ್ವಾಗತಿಸಿ ವಂದಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ನವೀನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version