Site icon Suddi Belthangady

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓಣಂ ಆಚರಣೆ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯನ್ನು ಸೆ.೦೭ ರಂದು ಪೂಕಳಂ (ಹೂವಿನ ರಂಗೋಲಿ) ಚಿತ್ತಾರ ಹಾಗೂ ಮಹಾಬಲಿ ಚಕ್ರವರ್ತಿಯ ವೇಷಧಾರಿಯ ಪ್ರವೇಶದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ಓಣಂ ಕೇರಳದ ಅತ್ಯಂತ ಮಹತ್ವದ ಹಬ್ಬವಾಗಿದೆ. ಇದು ರಾಜ ಮಾಹಬಲಿಯ ವಾರ್ಷಿಕ ಗೃಹ ಪ್ರವೇಶದ ಸಂಕೇತವಾಗಿದೆ. ಅವರ ಆಡಳಿತವು ರಾಜ್ಯಕ್ಕೆ ಅತ್ಯಂತ ಸಂಮೃದ್ಧ ಸಮಯ ಎಂದು ಹೇಳಿ ನೆರೆದ ಎಲ್ಲರಿಗೂ ಸಂತೋಷ ಮತ್ತು ಆನಂದ ತುಂಬಿದ ಓಣಂ ಹಬ್ಬದ ಶುಭಾಶಯವನ್ನು ಹಾರೈಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಅವರು ಮಾತನಾಡಿ ಇದು ಸಂತೋಷ ಮತ್ತು ಸಂಮೃದ್ಧಿಯಿಂದ ತುಂಬಿದ ಓಣಂ ಆಗಿರಲಿ. ಈ ಋತುವಿನಲ್ಲಿ ಸಾಕಷ್ಟು ಅದೃಷ್ಟ ಮನಸ್ಸಿನ ಶಾಂತಿ ಸಂತೋಷ ನಿಮ್ಮದಾಗಲಿ ಎಂದು ಹಾರೈಸಿದರು.
ತದನಂತರ ಎಂ.ಬಿ.ಎ. ವಿದ್ಯಾರ್ಥಿಗಳು ಓಣಂ ಹಾಡು ಹಾಗೂ ನೃತ್ಯ ವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಕೆ.ಎಸ್., ಎಂ.ಬಿ.ಎ. ಡೈರೆಕ್ಟರ್ ಡಾ. ಸುನಿಲ್ ಕುಮಾರ್ ಎಂ., ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version