Site icon Suddi Belthangady

ಅ.23ರಂದು ಸುಳ್ಯದಲ್ಲಿ ಮರಾಟಿ ಯುವ ವೇದಿಕೆ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ

 

ಗಿರಿದರ್ಶಿನಿ ಸಭಾಭವನದಲ್ಲಿ ಆಮಂತ್ರಣ ಪತ್ರ ಬಿಡುಗಡೆ


ಮರಾಟಿ ಸಮಾಜ ಸೇವಾ ಸಂಘ ಸುಳ್ಯ ತಾಲೂಕು, ಮರಾಟಿ ಮಹಿಳಾ ವೇದಿಕೆ ಸುಳ್ಯ ತಾಲೂಕು ಇದರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಮರಾಟಿ ಯುವ ವೇದಿಕೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಮರಾಟಿ ಸಮಾಜ ಬಾಂಧವರಿಗಾಗಿ ಅ.23 ರಂದು ಅಂತರ್ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟ ನಡೆಯಲಿದ್ದು, ಪಂದ್ಯಾಟದ ಆಮಂತ್ರಣ ಪತ್ರವನ್ನು ಇಂದು ಗಿರಿದರ್ಶಿನಿ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮರಾಟಿ ಸೇವಾ ಸಂಘದ ಅಧ್ಯಕ್ಷರಾದ ಜನಾರ್ಧನ ಬಿ.ಕುರುಂಜಿಭಾಗ್, ಗೌರವಾಧ್ಯಕ್ಷರಾದ ಸೀತಾನಂದ ಬೇರ್ಪಡ್ಕ, ಮಾಜಿ ಅಧ್ಯಕ್ಷರುಗಳಾದ ಎ.ಕೆ.ನಾಯ್ಕ್ ಚೊಕ್ಕಾಡಿ,ಬುದ್ಧ ನಾಯ್ಕ್, ದಾಮೋದರ ಮಂಚಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಯುವ ವೇದಿಕೆಯ ಅಧ್ಯಕ್ಷ ಮೋಹನ ಪೆರಾಜೆ, ಮರಾಟಿ ಸಮಾಜದ ಪದಾಧಿಕಾರಿಗಳಾದ ಐತ್ತಪ್ಪ ನಾಯ್ಕ್ ,ಜನಾರ್ಧನ ನಾಯ್ಕ್ ಕೇರ್ಪಳ, ರಘುನಾಥ ಜಟ್ಟಿಪಳ್ಳ,ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ.,ಶ್ರೀಮತಿ ಶೋಭಾ ಎ.ಕೆ.ನಾಯ್ಕ್,ಶ್ರೀಮತಿರೇವತಿ ದೊಡ್ಡೇರಿ,ಶ್ರೀಮತಿ ನಳಿನಾಕ್ಷಿ ಸೀತಾನಂದ,ಜನಾರ್ದನ ನಾಯ್ಕ್ ,ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಎಂ.,ಜತೆ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಸದಸ್ಯರುಗಳಾದ ಚೆನ್ನಕೇಶವ ಕಣಿಪಿಲ,ಗಿರಿಯಪ್ಪ ಕೇನ್ಯ, ಅಶೋಕ್ ಕುಮಾರ್ ದೊಡ್ಡೇರಿ,ಶಶಿಕುಮಾರ್ ಆಲೆಟ್ಟಿ,ಮನಮೋಹನ ಕುರುಂಜಿಗುಡ್ಡೆ ಉಪಸ್ಥಿತರಿದ್ದರು.

Exit mobile version