Site icon Suddi Belthangady

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ

ಸರಕಾರಿ ಪ್ರೌಢ ಶಾಲೆ ಎಣ್ಮೂರಿಗೆ ಸಮಗ್ರ ಪ್ರಶಸ್ತಿ

ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸೆ. 3ರಂದು ನಡೆದ ಪ್ರತಿಭಾ ಕಾರಂಜಿಯನ್ನು ಮುರುಳ್ಯ ಗ್ರಾ.ಪಂ. ಅಧ್ಯಕ್ಷರ ಕು. ಜಾನಕಿ ಮುರುಳ್ಯ ಉದ್ಘಾಟಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಮತಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ, ಪ್ರತಿಭಾ ಕಾರಂಜಿ ನೋಡೆಲ್ ವಸಂತ ಏನೆಕಲ್, ಬಿ.ಆರ್.ಪಿಮಲ. ಸುಬ್ರಹ್ಮಣ್ಯ ಕೆ.ಎನ್, ಸಿ.ಆರ್.ಪಿ. ಜಯಂತ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ಪೂದೆ ಅಧ್ಯಕ್ಷತೆ ವಹಿಸಿದ್ದರು.


ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ದಿವ್ಯಾ ಎಂ.ಕೆ ವಂದಿಸಿದರು. ಶಾಲಾ ಗಣಿತ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ಸರಕಾರಿ ಪ್ರೌಢಶಾಲೆ ಎಣ್ಮೂರು ಪ್ರಥಮ ಸಮಗ್ರ ಪ್ರಶಸ್ತಿ ಪಡೆದರೆ, ಕುಮಾರಸ್ವಾಮಿ ಸುಬ್ರಹ್ಮಣ್ಯ ವಿದ್ಯಾಸಂಸ್ಥೆ ದ್ವಿತೀಯ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.


ಎಣ್ಮೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಾಧನೆ
ವಿನ್ಯಾಸ್ ಜಾಕೆ (ಮಿಮಿಕ್ರಿ) ಪ್ರಥಮ, ಉಜ್ವಲ್ (ಹಾಸ್ಯ) ಪ್ರಥಮ, ಪ್ರಿಯಾ ಆರ್.ಕೆ. ರೈ (ಛದ್ಮವೇಷ) ಪ್ರಥಮ, ಸುಮಯ್ಯ (ಧಾ.ಪಠಣ) ಪ್ರಥಮ, ದಿಶಾ ಕೆ.ಜೆ (ಕನ್ನಡ ಭಾಷಣ) ಪ್ರಥಮ, ಆಯಿಷತ್ ಅಮೀರಾ (ಇಂಗ್ಲೀಷ್ ಭಾಷಣ) ಪ್ರಥಮ, ಆಯಿಷತುಲ್ ಅಫ್ರಾ(ಹಿಂದಿ ಭಾಷಣ) ಪ್ರಥಮ, ಸುಮಯ್ಯ ಮತ್ತು ತಂಡ (ಕವ್ವಾಲಿ) ಪ್ರಥಮ, ಪ್ರೀತಿ ಆರ್.ಕೆ. ರೈ ಮತ್ತು ತಂಡ (ಜಾನಪದ ನೃತ್ಯ) ದ್ವಿತೀಯ, ಶಿವಾನಿ (ರಂಗೋಲಿ) ದ್ವಿತೀಯ, ನಂದಕಿಶೋರ (ಚಿತ್ರ ಕಲೆ) ದ್ವಿತೀಯ, ಸಾನಿಕ (ಭರತನಾಟ್ಯ) ದ್ವಿತೀಯ, ಗಗನ್ ಕನ್ನಡ ಭಾಷಣ (ಸಾಮಾನ್ಯ) ದ್ವಿತೀಯ, ಯೋಗೀಶ (ಜನಪದ ಗೀತೆ) ತೃತೀಯ ಸ್ಥಾನ ಪಡೆದುಕೊಂಡರು.

Exit mobile version