Site icon Suddi Belthangady

ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಯುವಕನ ಮೇಲೆ ಫೋಕ್ಸೋ ದಾಖಲು

ದುಗಲಡ್ಕ ಭಾಗದ ಅಪ್ರಾಪ್ತೆಯ ಮೇಲೆ ಗ ಯುವಕನೋರ್ವ ಅತ್ಯಾಚಾರ ಮಾಡಿ ಕೇಸಿಗೊಳಗಾಗಿ ಫೋಕ್ಸೋ ಕೇಸು ದಾಖಲಾದ ಘಟನೆ ವರದಿಯಾಗಿದೆ.

ಗುತ್ತಿಗಾರಿನ ಜಯಪ್ರಕಾಶ್ ಎಂಬಾತನೇ ಜೈಲು ಪಾಲಾದ ಯುವಕ.

ದುಗಲಡ್ಕದ ಅಪ್ರಾಪ್ತ ಬಾಲಕಿ ಜ.11 ರಂದು ಸುಳ್ಯ ಜಾತ್ರೆಗೆ ಸಂಬಂಧಿಕರೊಂದಿಗೆ ತೆರಳಿದ್ದವಳು ಅಲ್ಲಿಂದ ಗುತ್ತಿಗಾರಿನ ತನ್ನ ಸಂಬಂಧಿಕರೊಂದಿಗೆ ಗುತ್ತಿಗಾರಿಗೆ ತೆರಳಿದ್ದಳೆನ್ನಲಾಗಿದೆ. ಈ ವೇಳೆ ಅಲ್ಲಿಯ ಸಂಬಂಧಿ ಜಯಪ್ರಕಾಶ್ ಎಂಬಾತ ಬಾಲಕಿಯನ್ನು ರಾತ್ರಿಯ ವೇಳೆ ಅತ್ಯಾಚಾರ ಮಾಡಿದ್ದಾಗಿ ಬಾಲಕಿಯ ತಂದೆ ಆ.21 ರಂದು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಸುಬ್ರಹ್ಮಣ್ಯ ಪೊಲೀಸರು ಜಯಪ್ರಕಾಶ್ ನನ್ನು ಬಂಧಿಸಿ ವಿಚಾರಿಸಿ ಫೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.

Exit mobile version