Site icon Suddi Belthangady

ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ

 

ನಡ : “ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ದೃಢತೆಗೆ ಸಹಕಾರಿಯಾಗುತ್ತದೆ. ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳು ಸಫಲತೆ ಕಂಡು ಕೊಂಡಾಗ ಯಶಸ್ವಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ “. ಎಂದು ನಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಗೌಡ ತಿಳಿಸಿದರು.

ಅವರು ಕಾಲೇಜಿನ ಕ್ರೀಡಾಕೂಟವನ್ನು ದೀಪಪ್ರಜ್ವಲನದ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ, ವಾಣಿ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ. ಗೌರವ ರಕ್ಷೆ ಸ್ವೀಕರಿಸಿ ದರು. ನಡ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಿರಣ್ ರವರು ಕ್ರೀಡಾ ಧ್ವಜಾರೋಹಣ ಗೈದರು. ಕುಮಾರಿ ಹರ್ಷ, ಕುಮಾರಿ ಚೇತನ, ಶಶಾಂಕ್ ಮತ್ತು ಸುದೀಪ್ ಕ್ರೀಡಾಜ್ಯೋತಿ ನಿರ್ವಹಣೆ ಗೈದರು.ಪ್ರೌಢ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನೊಂದಿಗೆ , ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಜಿತ್ ಆರಿಗ, ಉದ್ಯಮಿ ವಸಂತ ಗೌಡ ವಿ. ಜಿ. ಕೂಲ್, ಉದ್ಯಮಿ ಕರುಣಾಕರ ಗೌಡ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೀರಪ್ಪ ಸಾಲಿಯಾನ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಯಾಕೂಬ್, ಸಹಶಿಕ್ಷಕ ಶಿವಪುತ್ರ ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿ, ಕ್ರೀಡಾ ಸಂಯೋಜಕಿ ವಸಂತಿ ಪಿ. ಯವರು ವಂದಿಸಿದರು. ವಿದ್ಯಾರ್ಥಿನಿಯರಾದ ನೀಲಾವತಿ, ಬಿಸ್ಮಿತಾ, ದೀಕ್ಷಾ, ದೀಪ್ತಿ, ತೃಪ್ತಿ ಪ್ರಾರ್ಥಿಸಿದರು.ವಿದ್ಯಾರ್ಥಿ ನಾಯಕ ನಿತೇಶ್ ಪ್ರತಿಜ್ಞಾವಿಧಿ ಬೋಧಿಸಿದರು.ಕ್ರೀಡಾ ತರಬೇತುದಾರ ಹರ್ಷ ಕ್ರೀಡಾಕೂಟ ನೆರವೇರಿಸಿಕೊಟ್ಟರು.ಉಪನ್ಯಾಸಕರಾದ ಶ್ರೀಮತಿ ಲಿಲ್ಲಿ ಪಿ. ವಿ.,  ಸುಖೇತ,ವಿದ್ಯಾ ಸಹಕರಿಸಿದರು, ಉಪನ್ಯಾಸ ಮೋಹನ ಗೌಡ ನಿರೂಪಿಸಿದರು.

Exit mobile version