Site icon Suddi Belthangady

ಸೂಳಬೆಟ್ಟು: ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ; ಸಂಘದ ನೂತನ ಕಟ್ಟಡ ರಚನೆಗೆ ಪೂರ್ಣ ಸಹಕಾರ: ಶಾಸಕ ಹರೀಶ್ ಪೂಂಜ

ಅಳದಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ರಚನೆಗಾಗಿ ಶಿಲಾನ್ಯಾಸ ಕಾರ್ಯಕ್ರಮ ನ.27 ರಂದು ನಡೆಯಿತು‌.

ಕೆಸರುಕಲ್ಲು ಹಾಗೂ ಹಾಲು ಎರೆಯುವುದರ ಮೂಲಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಹರೀಶ ಪೂಂಜ ಅವರು ಕಟ್ಟಡ ರಚನೆ ಸಂದರ್ಭ ರೂ.1 ಲಕ್ಷ ದೇಣಿಗೆಯನ್ನು ನೀಡುವುದಾಗಿ ಹಾಗೂ ಕಟ್ಟಡದ ಸುತ್ತ ಇಂಟರ್‌ಲಾಕ್ ಅಳವಡಿಸಿ ಕೊಡುತ್ತೇನೆಂದು ಆಶ್ವಾಸನೆಯಿತ್ತರು.ಬಳಿಕ ಅವರು ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ‌ ನಿರಂಜನ ಜೋಶಿ ಅವರನ್ನು ಸನ್ಮಾನಿಸಿದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಭಾರ್ಗವ ಮರಾಠೆ ಶಿಲಾನ್ಯಾಸದ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ.ರಾಮಚಂದ್ರ ಭಟ್, ವಿಸ್ತರಣಾಧಿಕಾರಿ ಸುಚಿತ್ರಾ, ಇಂಜಿನಿಯರ್ ಶ್ರವಣ ಕೆ., ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ, ಸದಸ್ಯ ಪ್ರವೀಣ್, ಅಂಡಿಂಜೆ ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪೂಜಾರಿ ಕುಕ್ಕೇಡಿ, ಸದಸ್ಯ ದಿನೇಶ್ ಮೂಲ್ಯ ಫಂಡಿಜೆ, ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಶಿವಭಟ್, ನಿರ್ದೇಶಕ ಶಶಿಧರ ಎ., ಅಳದಂಗಡಿ ಹಾ.ಉ.ಸ.ಸಂ.ದ ಅಧ್ಯಕ್ಷ ಗಣೇಶ್ ದೇವಾಡಿಗ, ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ, ಸೂಳಬೆಟ್ಟು, ಸಂಘದ ನಿಕಟಪೂರ್ವ ಅಧ್ಯಕ್ ಹರೀಶ್ ಪೂಜಾರಿ, ಸ.ಕಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ್ ಪೂಜಾರಿ, ಸಂಘದ ಉಪಾಧ್ಯಕ್ಷೆ ವನಿತಾ, ಕಾರ್ಯದರ್ಶಿ ಚೈತ್ರಾ, ನಿರ್ದೇಶಕರುಗಳು, ಸಿಬ್ಬಂದಿ ನಾಗವೇಣಿ, ಊರಿನ ಗಣ್ಯರಾದ ಮುರಲೀಧರ ಗೋಖಲೆ, ಪ್ರಭಾಕರ ಆಠವಳೆ, ವೆಂಕಟೇಶ ಗೋಖಲೆ, ಕಾಜು, ಕರುಣಾಕರ ಹೆಗ್ಡೆ, ಫಂಡಿಜೆಯ ಶರಶ್ಚಂದ್ರ ತಾಮನ್ಕರ್, ಗೋಪಾಲ ತಾಮನ್ಕಾರ್, ಮತ್ತಿತರರು ಉಪಸ್ಥಿತರಿದ್ದರು.

Exit mobile version