Site icon Suddi Belthangady

ತಾಲೂಕು ಮಟ್ಟದ ಕಬಡ್ಡಿ ಮತ್ತು ಖೋಖೋ ಸ್ಪರ್ಧೆಯ ಫಲಿತಾಂಶ

ನಾವೂರು: ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಸರಕಾರದ ಸುತ್ತೋಲೆಯಂತೆ ನ.20ರಂದು ನಾವೂರು ಹಿರಿಯ ಪ್ರಾತಮಿಕ ಶಾಲಾ ಆಟ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಮತ್ತು ಖೋಖೋ ಸ್ಪರ್ಧೆ ನಡೆಸಲಾಗಿತ್ತು.

ಸ್ಪರ್ಧೆಯ  ಫಲಿತಾಂಶ:

ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ತಣ್ಣೀರುಪಂತ ಗ್ರಾಮ ಪಂಚಾಯತ್ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಮಡಂತ್ಯಾರು ಗ್ರಾ.ಪಂ ಪಡೆದುಕೊಂಡಿದೆ. ಬೆಸ್ಟ್ ರೈಡರ್ ಆಗಿ ಇಲಿಯಾಸ್ ತಣ್ಣೀರುಪಂತ, ಬೆಸ್ಟ್ ಡಿಫೆಂಡರ್ ಆಗಿ ಚರಣ್ ತಣ್ಣೀರುಪಂತ, ಬೆಸ್ಟ್ ಆಲ್ ರೌಡರ್ ಆಗಿ ಡ್ಯಾನಿ ಮಡಂತ್ಯಾರು ಪಡೆದುಕೊಂಡರು.

ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ನಾವೂರು ಗ್ರಾ.ಪಂ, ದ್ವಿತೀಯ ಸ್ಥಾನ ಆರಂಬೋಡಿ ಗ್ರಾ.ಪಂ ಪಡೆದುಕೊಂಡಿದೆ. ಬೆಸ್ಟ್ ರೈಡರ್ ಆಗಿ ದೀಪಿಕಾ ನಾವೂರು, ಬೆಸ್ಟ್ ಡಿಫೆಂಡರ್ ನಳಿನಾಕ್ಷಿ ಆರಂಬೋಡಿ ಮತ್ತು ಬೆಸ್ಟ್ ಆಲ್ ರೌಂಡರ್ ದೀಪ ನಾವೂರು  ಪಡೆದುಕೊಂಡಿದ್ದು, ಪುರುಷರ ಖೋಖೋ ಸ್ಪರ್ಧೆಯಲ್ಲಿ ವೇಣೂರು ಗ್ರಾ.ಪಂ ಪ್ರಥಮ, ಅಳದಂಗಡಿ ಗ್ರಾ.ಪಂ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬೆಸ್ಟ್ ರನ್ನರಾಗಿ ದರ್ಣಪ್ಪ ಅಳದಂಗಡಿ, ಬೆಸ್ಟ್ ಚೇಸರ್ ಆಗಿ ಸುಹಾಸ್ ವೇಣೂರು ಮತ್ತು ಬೆಸ್ಟ್ ಆಲ್ ರೌಂಡರ್ ಗಿರೀಶ್ ವೇಣೂರು ಪೆಡೆದುಕೊಂಡರು. ಮಹಿಳಾ ಖೋ ಖೋ ಸ್ಪರ್ಧೆಯಲ್ಲಿ ಬಂದಾರು ಗ್ರಾ.ಪಂ ಪ್ರಥಮ ಸ್ಥಾನ, ನಾವೂರು ಗ್ರಾ.ಪಂ ದ್ವಿತೀಯ ಸ್ಥಾನ ಪಡೆದರೆ, ಬೆಸ್ಟ್ ರನ್ನರ್ ಆಗಿ ಚೈತ್ರ ನಾವೂರು, ಬೆಸ್ಟ್ ಚೇಸರ್ ಆಗಿ ಪ್ರಶಾಂತಿ ಬಂದಾರು, ಬೆಸ್ಟ್ ಆಲ್ ರೌಂಡರ್ ಆಗಿ ಮೋಹಿನಿ ಬಂದಾರು ಪಡೆದುಕೊಂಡಿದ್ದಾರೆ.

Exit mobile version