Site icon Suddi Belthangady

ಕಲ್ಮಂಜ: ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಕಲ್ಮಂಜ: ಮಹಿಳೆಯರು ಸಶಕ್ತರಾಗುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಂಜೀವಿನಿ ಒಕ್ಕೂಟಗಳು ಸಹಕಾರಿ. ನೀವು ಹಕ್ಕುಗಳನ್ನು ಅರಿಯಿರಿ. ಸ್ವ ಉದ್ಯೋಗಿಗಳಾಗಿ. ಸಮಾಜದಲ್ಲಿ ಹಿಂದೆ ಉಳಿಯಬೇಡಿ ಎಂದು ಗ್ರಾಮೀಣ ಜೀವನೋಪಾಯ ಚಟುವಟಿಕೆಗಳ ಸಂಜೀವಿನಿ ಒಕ್ಕೂಟಗಳ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕಿ ಪ್ರತಿಮಾ ಹೇಳಿದರು.

ಅವರು ನ.14ರಂದು ಕಲ್ಮಂಜ ಗ್ರಾಮ ಪಂಚಾಯತ್‌ನಲ್ಲಿ ನಡೆದ ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆಯಲ್ಲಿ ಮಾತನಾಡಿದರು.

ಯುವ ವೃತ್ತಿಪರ ವಿನೀತ್, ಉತ್ಪ್ಪಾದಕ ಗುಂಪುಗಳ ಕುರಿತು ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಜಯಾನಂದ್ ಲಾಯ್ಲ, ಒಕ್ಕೂಟದ ಕಾರ್ಯದರ್ಶಿ ಸೌಮ್ಯಾ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಅವರು ಸ್ಮರಣಿಕೆ ನೀಡಿದರು.
ನೂತನ ಅಧ್ಯಕ್ಷೆಯಾಗಿ ಶೋಭಾ, ಕಾರ್ಯದರ್ಶಿಯಾಗಿ ವಿದ್ಯಾ, ಉಪಾಧ್ಯಕ್ಷೆಯಾಗಿ ಪುಷ್ಪಾ, ಖಜಾಂಚಿಯಾಗಿ ಬಾಲಕ್ಕ, ಜೊತೆ ಕಾರ್ಯದರ್ಶಿಯಾಗಿ ಮಮತಾ ಹಾಗೂ ಇತರ ಸದಸ್ಯರನ್ನು ಆಯ್ಕೆಯಾದರು. ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ, ಪ್ರದರ್ಶನಕ್ಕೆ ಇಡಲಾಯಿತು.
ಒಕ್ಕೂಟದ ಸದಸ್ಯೆ ಶಶಿಕಲಾ ಸ್ವಾಗತಿಸಿ, ಎಂಬಿಕೆ ಪುಷ್ಪಾ ನಿರ್ವಹಿಸಿ, ವಂದಿಸಿದರು.

Exit mobile version